ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಫ್ರಿಕಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 100ಕೋಟಿ ಬೆಲೆಯ 14ಕೆಜಿ ಹೆರಾಯಿನ್ ವಶ

ದೇವನಹಳ್ಳಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ DRI ಅಧಿಕಾರಿಗಳು (ಕಂದಾಯ ಗುಪ್ತಚರ ನಿರ್ದೇಶನಾಲಯ) ತೆಲಂಗಾಣ ಮೂಲದ ವ್ಯಕ್ತಿಯನ್ನು ಬಂಧಿಸಿ ಆತನ ಬಳಿ ಇದ್ದ 14ಕೆ.ಜಿ.ತೂಕದ 100ಕೋಟಿ ಬೆಲೆಯ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.

ಆಫ್ರಿಕಾ ಖಂಡದ ಇಥಿಯೋಪಿಯ ದೇಶದ ಅಡಿಸ್ ಅಬಾಬಾ ಸಿಟಿಯಿಂದ ಈತ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಕಳ್ಳಸಾಗಾಣೆ ಜಾಲವನ್ನು ಭೇದಿಸಿದ DRI ಅಧಿಕಾರಿಗಳು ಆತನ ಬ್ಯಾಗ್‌ನ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ಬ್ಲಾಗ್‌ನಲ್ಲಿ ದೊಡ್ಡ ಪ್ರಮಾಣದ ಹೆರಾಯಿನ್ ಪತ್ತೆಯಾಗಿದೆ.

ಸುಮಾರು 40ವರ್ಷದ ತೆಲಂಗಾಣದ ಆರೋಪಿ ಇಷ್ಟು ಪ್ರಮಾಣದ ಡ್ರಗಸ್‌ಅನ್ನು ದೆಹಲಿ ಮೂಲದ ವ್ಯಕ್ತಿಗೆ ನೀಡಲು ಉದ್ದೇಶಿಸಿದ್ದ. ಈತನಿಗೆ ಫ್ಲೈಟ್ ಟಿಕೆಟ್, ಫೈವ್ ಸ್ಟಾರ್ ಹೋಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

Edited By : Nagaraj Tulugeri
PublicNext

PublicNext

27/08/2022 12:07 pm

Cinque Terre

19.43 K

Cinque Terre

2

ಸಂಬಂಧಿತ ಸುದ್ದಿ