ಯಲಹಂಕ: ತಮ್ಮಭಾಗದ ಆಸ್ತಿಯನ್ನು ಸ್ವಂತ ತಾತ ಪುಟ್ಟಯ್ಯ(70) ವಿಭಾಗ ಮಾಡುತ್ತಿಲ್ಲ ಎಂದು ಭಾವಿಸಿ ಮೊಮ್ಮಗ ಜಯಂತ್ @ ಬಳ್ಳೆ ಆತನ ಇನ್ನೊಬ್ಬ ಸಹಚರ ಯಾಸಿನ್ ಎಂಬ ಮೈಸೂರು ಮೂಲದ ಇಬ್ಬರು ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಯಲಹಂಕ ಪೊಲೀಸರು ಮೈಸೂರಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ಆಗಸ್ಟ್ 17ರ ಮುಂಜಾನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿ ಸುರಭಿ ಲೇಔಟ್ ನ 2ನೇ ಮೇನ್ 6ನೇ ಕ್ರಾಸ್ ನಂ 23ರ ಮನೆಲಿ ಪುಟ್ಟಯ್ಯ ವಾಸವಿದ್ದರು. ಆಸ್ತಿ ಭಾಗ ಮಾಡುತ್ತಿಲ್ಲ ಹಾಗೂ ಲೋನ್ ಮಾಡಲು ತಾತ ಸಹಕರಿಸುತ್ತಿಲ್ಲ. ಆದ್ದರಿಂದ ತಾತನನ್ನು ಕೊಲೆ ಮಾಡಿಯಾದರೂ ಆಸ್ತಿ ವಿಭಾಗ ಮಾಡಿಕೊಳ್ಳಲು ಜಯಂತ್ ನಿರ್ಧರಿಸಿ ಬಂದಿದ್ದ. ಅದೇ ರೀತಿ ಕೊಲೆ ಮಾಡಿ ಮೈಸೂರಿಗೆ ತೆರಳಿದ್ದರು. ಘಟನೆ ಸಂಬಂಧ ದೂರು ದಾಖಲಿಸಿ, ತನಿಖೆ ನಡೆಸಿದ ಯಲಹಂಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
20/08/2022 02:11 pm