ಬೆಂಗಳೂರು: ಜಮೀನು ಇತ್ಯರ್ಥಕ್ಕೆ ಲಂಚ ಪಡೆದ ಪ್ರಕರಣದ ಆರೋಪದಡಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಡಿಸಿ ಜೆ.ಮಂಜುನಾಥ್ ಗೆ ಜೈಲಿನ ನಿಯಮದ ಪ್ರಕಾರ ವಿಚಾರಣಾಧೀನ ಕೈದಿಯ ಸಂಖ್ಯೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಂತೆ ಜೈಲಾಧಿಕಾರಿಗಳು ಐಎಎಸ್ ಅಧಿಕಾರಿ ಮಂಜುನಾಥ್‌ಗೆ 6773/2022 ನಂಬರ್ ನೀಡಿ ಕೊವಿಡ್ ಬ್ಯಾರಕ್ ಗೆ ಕಳುಹಿಸಿದ್ದಾರೆ.
ಇನ್ನೂ ಡಿಸಿ ಬಂಧನ ಆಗ್ತಿದ್ದಂತೆ ಮಂಜುನಾಥ್ ಉಳಿದುಕೊಂಡಿದ್ದ ಯಶವಂತಪುರ ಪ್ಲಾಟ್ ನಲ್ಲಿ ಎಸಿಬಿ ಅಧಿಕಾರಿಗಳು ಶೋಧಕಾರ್ಯ ನಡೆಸಿದರು. ಪರಿಶೀಲನೆ ವೇಳೆ ಎಸಿಬಿ ಡಿವೈಎಸ್ಪಿ ಬಸವರಾಜ್ ಮುಗ್ಧಂ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ದಾಳಿ ವೇಳೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 30 ಎಕರೆ ಜಾಗ ಹೊಂದಿರುವ ದಾಖಲೆ ಪತ್ತೆಯಾಗಿದೆ ಎನ್ನಲಾಗಿದೆ. ಜೊತೆಗೆ ಸಂಬಂಧಿಕರ ಹೆಸರಿನಲ್ಲೂ ಕೋಟಿ ಕೋಟಿ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಮಂಜುನಾಥ್ ಅವರ ಬ್ಯಾಂಕ್ ಖಾತೆಗಳ ವಿವರವನ್ನೂ ಪಡೆಯುತ್ತಿದ್ದಾರೆ.
PublicNext
05/07/2022 10:26 pm