ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜಯ್ 'ಬೀಸ್ಟ್', ಈಗ ಯಶ್ ಕೆಜಿಎಫ್ 2 'ತಮಿಳು ರಾಕರ್ಸ್ & ಟೆಲಿಗ್ರಾಮ್‌'ನಲ್ಲಿ ಲೀಕ್!

ಬೆಂಗಳೂರು: ಯಶ್ ಅವರ ಕೆಜಿಎಫ್ 2 ಪೈರಸಿ ಆಧಾರಿತ ಕೆಲವು ವೆಬ್‌ಸೈಟ್‌ಗಳಲ್ಲಿ ಬಿಡುಗಡೆಯಾಗಿರುವುದು ವಿಷಾದಕರ. ಹಲವಾರು ಮುಂದೂಡಿಕೆಗಳ ನಂತರ, ಹಿಟ್ ಚಿತ್ರ ಕೆಜಿಎಫ್ 1 ರ ಸೀಕ್ವೆಲ್, 2ನೇ ಭಾಗ ಕೆಜಿಎಫ್ ಇಂದು ಬಿಡುಗಡೆಯಾಯಿತು.

ದುರದೃಷ್ಟವಶಾತ್ ಈ ಚಿತ್ರವೂ ಪೈರಸಿಗೆ ಬಲಿಯಾಗಿದೆ. ಹೌದು, ಯಶ್ ಅವರ ಕೆಜಿಎಫ್ 2 ಕೆಲವು ತಿಳಿದಿರುವ ಪೈರಸಿ ಆಧಾರಿತ ವೆಬ್‌ಸೈಟ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರಸ್ತುತ ಬೆಳವಣಿಗೆಯು ಥಿಯೇಟರ್‌ಗಳಲ್ಲಿ ಅದು ಸುಗಮವಾಗಿ ಓಡುವುದರ ಮೇಲೆ ಪ್ರಭಾವ ಬೀರಿ, ಬಾಕ್ಸ್ ಆಫೀಸ್ ಸಂಗ್ರಹದ ಮೇಲೆಯೂ ಪರಿಣಾಮ ಬೀರಬಹುದು.

ಇಂಟರ್‌ನೆಟ್‌ನಲ್ಲಿ ಲಿಂಕ್‌ಗಳನ್ನು ನೋಡಿದ ಯಶ್ ಅಭಿಮಾನಿಗಳು ಚಿತ್ರತಂಡಕ್ಕೆ ಕಳುಹಿಸಿದ್ದಾರೆ. ಯಾವುದೇ ರೀತಿಯಲ್ಲಿ ಪೈರಸಿಯನ್ನು ಬೆಂಬಲಿಸಬೇಡಿ ಮತ್ತು ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಸಾರ್ವಜನಿಕರನ್ನು ಕೋರಿದ್ದಾರೆ.

ಅಂದ ಹಾಗೆ, ಕೆಜಿಎಫ್ ಕನ್ನಡದ ಮೊದಲ ಚಿತ್ರವಲ್ಲ, ಕೆಲವು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರ 'ಜೇಮ್ಸ್' ಕೂಡ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು.

- ನವೀನ್, 'ಪಬ್ಲಿಕ್ ನೆಕ್ಸ್ಟ್'

ಬೆಂಗಳೂರು.

Edited By : Nagesh Gaonkar
PublicNext

PublicNext

14/04/2022 10:54 pm

Cinque Terre

34.2 K

Cinque Terre

0