ಉದ್ಯಮಿಗೆ ಹನಿ ಟ್ರಾಪ್ ಮಾಡಿದ್ದ ಹಿನ್ನೆಲೆ ಯುವ ಉದ್ಯಮಿಯನ್ನ ಹಲಸೂರು ಗೇಟ್ ಪೊಲೀಸ್ರು ಬಂಧಿಸಿದ್ದಾರೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂಬಾತನೇ ಬಂಧಿತ ಅರೋಪಿ
'ಮಿಸ್ಟರ್ ಭೀಮರಾವ್' ಎಂಬ ಸಿನಿಮಾ ಮಾಡುವುದಾಗಿ ಯುವರಾಜ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಸಹ ಉದ್ಯಮಿ ಕವನ ಎಂಬಾಕೆಯ ಮೊಬೈಲ್‌ನಲ್ಲಿ ಈತ ಚಾಟ್ ಮಾಡಿದ್ದ. ಕವನ ಮತ್ತು ನಿಧಿ ಎಂಬುವರ ಹೆಸರು ಬಳಸಿ ಚಾಟ್ ಮಾಡುತ್ತಿದ್ದ. ಉದ್ಯಮಿಗೆ ಇತ್ತೀಚೆಗೆ ಪರಿಚಯ ಅಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ ನಂತರ ಉದ್ಯಮಿಗೆ ಭೇಟಿಯಾಗಿ ತಾನು ಕ್ರೈಮ್ ಪೊಲೀಸ್ ಎಂದು ಹೇಳಿ ಹೆದರಿಸಿದ್ದ.
ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಹೇಳಿ ಕೇಸ್ ಮುಂದುವರಿಸದೇ ಇರಲು ಹಣ ಕೇಳಿದ್ದ. ಮೊದಲಿಗೆ ಐವತ್ತು ಸಾವಿರ. ನಂತ್ರ ಬ್ಯಾಂಕ್‌ನನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾಗಿ ದೂರುದಾರ ಹಲಸೂರು ಗೇಟ್ ಪೊಲೀಸ್ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಆರೋಪಿ ಅರೆಸ್ಟ್ ಆಗಿದ್ದು ಯುವರಾಜ್ ಮತ್ತು ಕವನ ಒಟ್ಟಿಗೆ ಫಿಟ್‌ನೆಸ್ ಶಾಪ್ ನಡೆಸ್ತಿದ್ರು ಎಂದು ಗೊತ್ತಾಗಿದೆ.
PublicNext
13/08/2022 02:10 pm