ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದ ಬಡ ರೈತ ನಾಗರಾಜ್ ಎಂಬುವವರ ಜಮೀನಿನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಎರಡು ದಿನಗಳ ಹಿಂದೆ ಒಂದೂವರೆ ಲಕ್ಷ ಸಾಲ ಮಾಡಿ ಡ್ರಿಪ್ ಇರಿಗೇಷನ್ ಪೈಪ್‌ಗಳನ್ನು ತೋಟದ ಜಮೀನಲ್ಲಿ ಹಾಕಲಾಗಿತ್ತು. ರಾತ್ರಿ 7 ಗಂಟೆಯಲಿದ್ದ ಡ್ರಿಪ್ ಪೈಪ್ ಗಳು ಬೆಳಗಾಗುವಷ್ಟರಲ್ಲಿ ಮಾಯವಾಗಿವೆ. ಹತ್ತು ಗುಂಟೆ ಜಮೀನಿನಲ್ಲಿ ಡ್ರಿಪ್ ಪೈಪ್‌ಗಳನ್ನು ಅಳವಡಿಸಿದ್ದ ದಿನವೇ ಕದ್ದೊಯ್ದ ಕಾರಣ ಅನಾರೋಗ್ಯದ ನಾಗರಾಜ್ ಕುಟುಂಬ ಕಂಗಾಲಾಗಿದೆ.
ನಾಗರಾಜ ಶುಗರ್ ಕಾಯಿಲೆಯಿಂದ ನರಳುತ್ತ ಕೈಕಾಲು ಊದಿಕೊಂಡು ತೀವ್ರ ತೊಂದರೆ ಪಡ್ತಿದ್ದಾರೆ. ಅತೀವ ಬಡತನದ ನಡುವೆ ಸಾಲ ಮಾಡಿ ತನ್ನ ಮಗ ಕೃಷಿ ಮಾಡಲೇಂದು ಡ್ರಿಪ್‌ಗಳನ್ನು ಅಳವಡಿಸಿದ್ದ.ರಾತ್ರೋರಾತ್ರಿ ಕದೀಮರು, ಪೈಪ್‌ಗಳನ್ನ ಹೊತ್ತೊಯ್ದ ಪರಿಣಾಮ ಕುಟುಂಬ ಕಣ್ಣೀರು ಹಾಕುವಂತಾಗಿದೆ.
ಗ್ರಾಮಸ್ಥರ ಒತ್ತಾಯದಿಂದ ನಾಗರಾಜ್ ಡ್ರಿಪ್ ಪೈಪ್‌ಗಳ ಕಳವಿನ ಬಗ್ಗೆ ಚನ್ನರಾಯಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗ ಈ ಸಂಬಂಧ FIR ಕೂಡ ಆಗಿದೆ. ಈ ಮೂಲಕ ರೈತನಿಗೆ ಪೊಲೀಸರಿಂದ ನ್ಯಾಯ ಸಿಗುವಂತಾಗಲಿ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
Kshetra Samachara
11/06/2022 10:52 pm