ಬೆಂಗಳೂರು: ಸುಂದರ ಕನಸುಗಳನ್ನ ಹೊತ್ತ ನವಜೋಡಿಯದು. ಮದುವೆ ಸಂಭ್ರಮವನ್ನು ನಾಲ್ಕೈದು ತಿಂಗಳ ಹಿಂದಷ್ಟೆ ಮುಗಿಸಿದ್ದರು. ನಿನ್ನೆ ರಾತ್ರಿ ಪತಿ ಪತ್ನಿ ಸಿನಿಮಾ ನೋಡಿ ವಾಪಸ್ ಆಗುತ್ತಿದ್ದ ವೇಳೆ ದುರ್ಘಟನೆ ನಡೆದುಹೋಗಿದೆ.
ಆನಂದ್ ಮತ್ತು ಶ್ವೇತಾ ದಂಪತಿ ನಿನ್ನೆ (ಶನಿವಾರ) ರಾತ್ರಿ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಬಾಣಸವಾಡಿಯ ಕಲ್ಯಾಣನಗರದ ಬಳಿ ಹಿಂದಿನಿಂದ ಬಂದ ಅಪರಿಚಿತ ವಾಹನ ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ. ಅಲ್ಲೇ ನಿಂತಿದ್ದ ಲಾರಿಗೆ ಶ್ವೇತಾ-ಆನಂದ್ ದಂಪತಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಶ್ವೇತಾ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಪತಿ ಆನಂದ ಗಂಭೀರ ಗಾಯಗೊಂಡಿದ್ದಾರೆ. ಆನಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಒಬ್ಬಳೇ ಮಗಳನ್ನ ಶ್ವೇತಾ ಪೋಷಕರು ಆನಂದ್‌ಗೆ ಕೊಟ್ಟು ಮದುವೆ ಮಾಡಿಸಿದ್ದರು. ಇದೀಗ ಮಗಳಿಲ್ಲದ ಲೋಕದಲ್ಲಿ ಕಣ್ಣೀರೊಂದೆ ಅವರಿಗೆ ಉಳಿದಿರೋದು. ಹೆಬ್ಬಾಳ ಬಳಿ ವಾಸವಿದ್ದ ದಂಪತಿ ಕಂಪನಿಯೊಂದರಲ್ಲಿ ಇಬ್ಬರೂ ಕೂಡ ಕೆಲಸಕ್ಕೆ ಹೋಗ್ತಿದ್ರಂತೆ. ಸದ್ಯ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕ್ಸಿಡೆಂಟ್‌ಗೆ ಕಾರಣ ಯಾರು..? ಶ್ವೇತಾಳ ಸಾವಿಗೆ ಕಾರಣ ಏನು ಅನ್ನೋದನ್ನ ಪತ್ತೆ ಮಾಡ್ತಿದ್ದಾರೆ.
PublicNext
21/08/2022 02:19 pm