ಬೆಂಗಳೂರು: ಚಿಕ್ಕಬಳ್ಳಾಪುರ ಮೂಲದ ಗಾಯಾಳುವನ್ನು ಹೊತ್ತುಕೊಂಡು ಜೀವ ಉಳಿಸಲು ಬೆಂಗಳೂರಿನತ್ತ ತೆರಳುತ್ತಿದ್ದ ಆ್ಯಂಬುಲೆನ್ಸ್ ನ ಅತಿವೇಗ ಮತ್ತೊಂದು ಜೀವವನ್ನು ಬಲಿ ಪಡೆದಿದೆ!
ಹೀಗೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವ್ಯಕ್ತಿಯ ಹೆಸರು ಸಂಜೀವ್ ಕುಮಾರ್ (39). ಜಾರ್ಖಂಡ್ ಮೂಲದ ಸಂಜೀವ್, ಬೆಂಗಳೂರಿನ ಖಾಸಗಿ ಕಂಪನಿ ABBಯಲ್ಲಿ ಕೆಲಸ ಮಾಡ್ತಿದ್ದ. ಜಾಲಹಳ್ಳಿಯಲ್ಲಿ ವಾಸವಿದ್ದ ಸಂಜೀವ್, ಕಳೆದ ಶುಕ್ರವಾರ ರಾತ್ರಿ ಯಲಹಂಕದಿಂದ ಜಕ್ಕೂರು ಏರೋಡ್ರಮ್ ಫ್ಲೈ ಓವರ್ ಮೇಲೆ ಮಾರುತಿ ಎರ್ಟಿಗಾ ಕಾರಿನಲ್ಲಿ ಸಂಚರಿಸುತ್ತಿದ್ದ.
ಈ ವೇಳೆ ಹಿಂದಿನಿಂದ ಅತಿ ವೇಗವಾಗಿ ಬಂದ ಆ್ಯಂಬುಲೆನ್ಸ್ ನಿಯಂತ್ರಣ ತಪ್ಪಿ ಮುಂದೆ ಹೋಗ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಂಜೀವ್ ತಲೆಗೆ ಗಂಭೀರ ಗಾಯವಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜೀವ್ ಸಾವನ್ನಪ್ಪಿದ್ದಾರೆ. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಸಂಜೀವ್, ಒಂದು ವರ್ಷದ ಮಗುವನ್ನು ಹಾಗೂ ಹೆಂಡತಿಯನ್ನು ಅಗಲಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ
PublicNext
26/07/2022 10:01 am