ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಜಿದ್ದಿಗೆ ಬಿದ್ದವರಂತೆ ಆಟೋ ಓಡಿಸಿದ ಇಬ್ಬರು ಚಾಲಕರು: ಕೂದಲೆಳೆಯ ಅಂತರದಲ್ಲಿ ಪಾರಾದ ಬಾಲಕ

ದೊಡ್ಡಬಳ್ಳಾಪುರ : ಜಿದ್ದಿಗೆ ಬಿದ್ದವರಂತೆ ರೇಸ್ ರೀತಿಯಲ್ಲಿ ಹೊರಟ ಎರಡು ಆಟೋ ಚಾಲಕರ ಹುಚ್ಚಾಟಕ್ಕೆ ಬಾಲಕನೊಬ್ಬ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ರಸ್ತೆಯ ಬದಿಗೆ ಬಂದಿದ್ದಾನೆ. ಇದೇ ಸಮಯದಲ್ಲಿ ರೇಸ್ ಗೆ ಬಿದ್ದವರಂತೆ ಒಂದರ ಹಿಂದೆ ಮತ್ತೊಂದು ಆಟೋ ಅತಿವೇಗದಲ್ಲಿ ಬಂದಿದೆ. ಮೊದಲನೇ ಆಟೋದಿಂದ ಬಾಲಕ ಬಚಾವ್ ಆಗಿದ್ದಾನೆ. ಆದರೆ ಎರಡನೇ ಆಟೋ ಬಾಲಕನನ್ನ ಗುದ್ದಿಕೊಂಡು ಹೋಗಿದೆ. ಆಟೋ ಗುದ್ದಿದ ರಭಸಕ್ಕೆ ಬಾಲಕ 20 ಅಡಿಗೂ ಹೆಚ್ಚು ದೂರ ಹೋಗಿ ಬಿದ್ದಿದ್ದಾನೆ.

ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಾಯವಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ನಿಯಂತ್ರಣ ಕಳೆದುಕೊಂಡ ಆಟೋ ಚಾಲಕ ಕೋಳಿ ಅಂಗಡಿಗೆ ಗುದ್ದಿದ್ದಾನೆ. ಕೋಳಿ ಅಂಗಡಿ ಸಹ ಜಖಂ ಗೊಂಡಿದೆ. ಆಟೋ ಚಾಲಕರ ಹುಚ್ಚಾಟಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

09/06/2022 06:39 pm

Cinque Terre

28.72 K

Cinque Terre

1

ಸಂಬಂಧಿತ ಸುದ್ದಿ