ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ: ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಹೊಸ ಸವಾಲು..!

ಬೆಂಗಳೂರು: ಮೆಟ್ರೋ ರೈಲುಗಳ ಮೇಲೆ ದುಷ್ಕರ್ಮಿಗಳು ಪದೇ ಪದೇ ಕಲ್ಲು ತೂರಾಟ ಮಾಡುತ್ತಿದ್ದು, ಇದು ಬಿಎಂಆರ್ ಸಿಎಲ್ ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ.

ದುಷ್ಕರ್ಮಿಗಳು ಎಸೆದ ಕಲ್ಲುಗಳಿಂದ ನಮ್ಮ ಮೆಟ್ರೊ ರೈಲುಗಳ ಹೊರಾಂಗಣದ ಭಾಗಗಳಿಗೆ ಬಡಿಯುತ್ತಿದ್ದು, ಮುಚ್ಚಿದ ಕಿಟಕಿಗಳು ಮತ್ತು ಬಾಗಿಲುಗಳು ಮತ್ತು ಗಟ್ಟಿಮುಟ್ಟಾದ ಕಾರಣದಿಂದಾಗಿ ಅದೃಷ್ಟವಶಾತ್ ಈವರೆಗೆ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು, 'ಹಳಿಗಳನ್ನು ಹಾಕಿರುವ ಕಾಂಪೌಂಡ್ ಗೋಡೆಗಳ ಹೊರಗಿನಿಂದ ಹಾದುಹೋಗುವ ರೈಲುಗಳ ಮೇಲೆ ಕಲ್ಲಿನಿಂದ ದಾಳಿಗಳಾಗುತ್ತಿವೆ. ದುಷ್ಕರ್ಮಿಗಳು ಕಲ್ಲು ಎಸೆದು ಕೂಡಲೇ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಂಡರ್ ಗ್ರೌಂಡ್ ನಿಲ್ದಾಣಗಳು ವಸತಿ ಪ್ರದೇಶಗಳಿಗಿಂತ ಕೆಳಗಿರುವುದರಿಂದ ಇಂತಹ ವಿಧ್ವಂಸಕತೆಯಿಂದ ಸುರಕ್ಷಿತವಾಗಿವೆ. ಆದಾಗ್ಯೂ, ನೆಲದ ಮಟ್ಟದಲ್ಲಿ ಕೆಲವು ನಿಲ್ದಾಣಗಳು ಸಮಸ್ಯೆಯನ್ನು ಹೊಂದಿವೆ ಎಂದು ಅವರು ಹೇಳಿದರು.

ಪ್ರಮುಖವಾಗಿ ಮಾಗಡಿ ರಸ್ತೆ, ಚಿಕ್ಕಪೇಟೆ, ನ್ಯಾಷನಲ್ ಕಾಲೇಜು, ಸಿಟಿ ರೈಲ್ವೆ ಮತ್ತು ಶ್ರೀರಾಂಪುರ ನಿಲ್ದಾಣಗಳಲ್ಲಿ ರೈಲಿನ ಗಾಜಿನ ಕಿಟಕಿಯ ಗಾಜುಗಳು ಬಿರುಕು ಬಿಟ್ಟಿರುವ ಘಟನೆಗಳು ದಾಖಲಾಗಿವೆ.ಒಂದು ಹಾಳಾದ ಗಾಜನ್ನು ಬದಲಾಯಿಸಲು BMRCLಗೆ ಸುಮಾರು 10,000 ರೂ ವೆಚ್ಚವಾಗುತ್ತದೆ.

Edited By : PublicNext Desk
Kshetra Samachara

Kshetra Samachara

14/03/2022 07:18 pm

Cinque Terre

1.95 K

Cinque Terre

1

ಸಂಬಂಧಿತ ಸುದ್ದಿ