ಟಿಪ್ಪರ್ ಲಾರಿ ಸ್ಟೇರಿಂಗ್ ರಾಡ್ ಜಾಯಿಂಟ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಅಂಗಡಿಗಳಿಗೆ ನುಗ್ಗಿದ್ದು, ಈ ಸಂದರ್ಭ ಓರ್ವ ವ್ಯಕ್ತಿ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದ ಬೂದಿಹಾಳ್ ಗೇಟ್ ಬಳಿ ಸಂಭವಿಸಿದೆ.
ನೆಲಮಂಗಲ ತಾಲ್ಲೂಕು ಕಾಚನಹಳ್ಳಿ ಮೂಲದ ರಾಜಣ್ಣ (53) ಮೃತ ಪಟ್ಟವರು. ತುಮಕೂರು ಕಡೆಯಿಂದ ಎಂ ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯ ಸ್ಟೇರಿಂಗ್ ಕಟ್ಟಾಗಿ ನೋಡ ನೋಡುತ್ತಿದ್ದಂತೆಯೇ ಅಂಗಡಿ ಒಳಗೆ ನುಗ್ಗಿದೆ. ಆದ್ರೆ, ಅಂಗಡಿಗೆ ನುಗ್ಗುವ ಮುನ್ನ ಅಲ್ಲೇ ನಿಂತಿದ್ದ ರಾಜಣ್ಣ ಎಂಬವರು ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಒಂದು ದ್ವಿಚಕ್ರ ವಾಹನ ಜಖಂಗೊಂಡಿದೆ.
ನೆಲಮಂಗಲ ಸಂಚಾರಿ ಮತ್ತು ಗ್ರಾಮಾಂತರ ಠಾಣೆ ಪೊಲೀಸ್ರು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/02/2022 04:18 pm