ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಂಕಾಸುರ ಸಿನಿಮಾಗೆ ಹಾರೈಸಿದ ಕ್ರೇಜಿಸ್ಟಾರ್..

ರಿಪೋರ್ಟ್- ರಂಜಿತಾಸುನಿಲ್

ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ವಿನೋದ್ ಪ್ರಭಾಕರ್ ಅಭಿನಯದ ಲಂಕಾಸುರ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ರವಿಚಂದ್ರನ್ ಮಾತನಾಡಿ ವಿಲನ್ಸ್ ಮಕ್ಕಳೆಲ್ಲ ಹಿರೋ ಆಗಿದ್ದಾರೆ. ಅವರ ಅಪ್ಪಂದಿರು ನಮಗೆ ಹೊಡೆದು ನಮ್ಮನ್ನ ಹಿರೋಗಳನ್ನಾಗಿ ಮಾಡಿದ್ರು. ಇನ್ನು ಅಂಬರೀಶ್ ಅವರನ್ನ ನೆನೆದ ರವಿಚಂದ್ರನ್ ಅವರು ನನಗೆ ಮೊದಲ ಬಾರಿ ಫೈಟ್ ಹೇಳಿಕೊಟ್ಟಿದ್ದೆ ಅಂಬರೀಶ್ ಎಂದು ಹಳೆಯ ನೆನಪುಗಳನ್ನ ಹಂಚಿಕೊಂಡ್ರು.

ಅದೇ ರೀತಿ ಪ್ರಭಾಕರ್ ಅವರನ್ನ ನೆನೆದು ನಾನು ಅವರ ತೊಡೆ ಮೇಲೆ ಕೂತು ಬೆಳೆದವನು. ಅವರಿಗಿದ್ದ ಕ್ರೇಜ್ ಬೇರೆನೆ ಇತ್ತು. ಈಗ ಅವರ ಬದಲಿಗೆ ಅವರ ಮಗ ವಿನೋದ್ ಬಂದಿದ್ದು ಅವನೇ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಹಿರೋ ಆಗಿದ್ದಾನೆ. ಒಳ್ಳೆ ಚಿತ್ರಗಳನ್ನ ಕನ್ನಡಕ್ಕೆ ನೀಡಿ ಎಂದು ಶುಭ ಹಾರೈಸಿದರು.

Edited By : Nagesh Gaonkar
Kshetra Samachara

Kshetra Samachara

07/07/2022 10:36 pm

Cinque Terre

11.52 K

Cinque Terre

0

ಸಂಬಂಧಿತ ಸುದ್ದಿ