ಬೆಂಗಳೂರು: ಇತ್ತೀಚಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದ ಕನ್ನಡಿಗರಿಗೆ ಕಾರಿನ ಹಿಂಬದಿ ಇದ್ದ ಅಪ್ಪು ಫೋಟೋ ತೆರವು ಮಾಡುವಂತೆ ಅಲ್ಲಿನ ದೇವಾಲಯ ಭದ್ರತಾ ಸಿಬ್ಬಂದಿ ಸೂಚಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ಈ ವಿಚಾರಕ್ಕೆ ಟಿಟಿಡಿ ಪ್ರತಿಕ್ರಿಯೆ ನೀಡಿದೆ.
ಪಬ್ಲಿಕ್ ನೆಕ್ಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ ಆಡಳಿತ ಮಂಡಳಿ, ತಿರುಪತಿ ತಿರುಮಲ ದೇವಾಲಯ ಪ್ರವೇಶ ಮುನ್ನ ಕಾರಿಗೆ ಯಾವುದೇ ಭಾವಚಿತ್ರ, ಬ್ಯಾನರ್, ಫೋಟೋ ಹಾಕಿದ್ದರೆ ಪ್ರವೇಶ ಇಲ್ಲ. ಅಲ್ಲಿನ ವೈ.ಎಸ್.ಆರ್ ಕಾಂಗ್ರೆಸ್ ಸರ್ಕಾರ ಕೂಡ ಪಕ್ಷದ ಭಾವಚಿತ್ರ ಬಳಸಿ ದೇವಾಲಯಕ್ಕೆ ಹೋಗಲು ಸ್ಪಷ್ಟವಾಗಿ ಅನುಮತಿ ನಿರಾಕರಣೆ ಇದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತವೆ. ಅಲ್ಲದೆ ಕನ್ನಡಪರ ಹಾಗೂ ಅಪ್ಪು ಅಭಿಮಾನಿಗಳ ಸಂಘ ಮನವಿ ನೀಡಿದ್ದು, ಟಿಟಿಡಿ ಮುಖ್ಯ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ ಎಂದರು..
PublicNext
07/05/2022 05:34 pm