ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನ ಹೊಂದಿ ಇಂದಿಗೆ ಮೂರು ತಿಂಗಳೇ ಕಳೆದಿವೆ. ಈ ಮೂರನೇ ತಿಂಗಳ ದಿನವೇ ರಾಜ್ ಕುಟುಂಬ ವಿಶೇಷ ಕೆಲಸ ಮಾಡಿದೆ.
ಪುನೀತ್ ಸಮಾಧಿ ಬಳಿ ಹರಿದು ಬರ್ತಿರೋ ಅಭಿಮಾನಿಗಳಿಗೆ ಗಿಡ ವಿತರಿಸೋ ಕೆಲಸ ಮಾಡಿದ್ದಾರೆ. ಪರಿಸರದ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದ ಪುನೀತ್ ಹೆಸರಲ್ಲಿಯೇ ಈಗ ಗಿಡಗಳನ್ನ ವಿತರಿಸಲಾಗಿದೆ.
ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್ ಸಮಾಧಿಗೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ಹಾಗೂ ಮಕ್ಕಳು ರಾಘವೇಂದ್ರ ರಾಜ್ ಕುಮಾರ್ ಕುಟುಂಬದವರಿಂದ ಪೂಜೆ ಸಲ್ಲಿಸಲಾಗಿದೆ.ವಿಜಯ್ ರಾಘವೇಂದ್ರ ಸೇರಿದಂತೆ ಇನ್ನಿತರರು ಇಲ್ಲಿಗೆ ಆಗಮಿಸಿ ಪುನೀತ್ ಸಮಾಧಿಗೆ ನಮಿಸಿದ್ದಾರೆ.
Kshetra Samachara
29/01/2022 08:38 pm