ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದುಃಖದಲ್ಲಿಯೂ ಅಪ್ಪು ಅಭಿಮಾನಿಯನ್ನು ಮಾತನಾಡಿಸಿದ ಅಶ್ವಿನಿ ಪುನೀತ್!

ಬೆಂಗಳೂರು: ಅಪ್ಪು ಅಗಲಿಕೆಯ ನಂತರ ಅವರ ಅನೇಕ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಭಿಮಾನ ತೋರಿದ್ದಾರೆ. ಆ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದ ಮಣಿಕರಣ್ ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ ‘ಮೌಂಟ್ ನೇರ್ ಗುರುಪ್ರಕಾಶ್‘ರ ಅಭಿಮಾನದ ಬೈಸಿಕಲ್ ಯಾತ್ರೆ ಯಶಸ್ವಿಯಾಗಿದೆ.

ಇನ್ನು ಅಪ್ಪು ಸಮಾಧಿಗೆ ಭೇಟಿ ನೀಡಿದ ಗುರು ಅವರನ್ನು ಸ್ವಾಗತಿಸಿದ ದೊಡ್ಮನೆಯ ಶಿವಣ್ಣ, ರಾಘಣ್ಣ ಅವರನ್ನು ಸನ್ಮಾನಿಸಿದ್ದರು. ಬಳಿಕ, ಗುರು ಪ್ರಕಾಶ್ ಗೌಡ ಅವರನ್ನು ತಮ್ಮ ಮನೆಯ ಬಳಿ ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಕೂಡ, ಅಪ್ಪು ಅವರ ಈ ಅಪರೂಪದ ಅಭಿಮಾನಿಯನ್ನು ಅಭಿನಂದಿಸಿದ್ದಾರೆ.

ಇದೀಗ, ‘ಮೌಂಟ್ ನೇರ್ ಗುರುಪ್ರಕಾಶ್‘ ಅವರನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭೇಟಿ ಮಾಡಿ ಅಭಿನಂದಿಸಿ, ಭಾವುಕರಾಗಿದ್ದಾರೆ.

ಸದ್ಯ ಅಶ್ವಿನಿ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ..

Edited By : Manjunath H D
PublicNext

PublicNext

26/01/2022 06:27 pm

Cinque Terre

40.14 K

Cinque Terre

0

ಸಂಬಂಧಿತ ಸುದ್ದಿ