ಬೆಂಗಳೂರು: ಪುನೀತ್ ಸ್ವಗಸ್ಥರಾಗಿ ನಾಳೆಗೆ ೧೨ ನೇ ದಿನ ಈ ಹಿನ್ನಲೆಯಲ್ಲಿ ತಿಥಿ ಕಾರ್ಯದ ಊಟಕ್ಕೆ ಅರಮನೆ ಮೈದಾನದಲ್ಲಿ ಸಿದ್ದತೆ ನಡೆಯುತ್ತಿದೆ.
ಅಡುಗೆ ಭಟ್ಟರು, ಕ್ಲೀನಿಂಗ್ ಕೆಲಸದವರು,ಸಹಾಯಕರು ಸೇರಿ ಒಂದು ಸಾವಿರಕ್ಕೂ ಅಧಿಕ ಜನರು ನಾಳೆಯ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅಡುಗೆ ಭಟ್ಟರು ಸೇರಿದಂತೆ ಸಿಬ್ಬಂದಿಗಳು
ತರಕಾರಿ ಕಟ್ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ವೆಜ್ ಹಾಗೂ ನಾನ್ ವೆಜ್ ಎರಡೂ ಅಡುಗೆಗೂ ರೆಡಿ ಮಾಡಲಾಗುತ್ತಿದೆ.
ಮಾಗಡಿ, ಚಿತ್ರದುರ್ಗ, ತುಮಕೂರು, ಹುಬ್ಬಳಿ, ರಾಯಚೂರು, ಗುಲ್ಬರ್ಗಾ, ಧಾರವಾಡ, ಕನಕಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಕೆಲಸಗಾರರು ಈಗಾಗಲೇ ಬಂದಿದ್ದು ನಾಳಿನ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.
ಎರಡು ವಿಭಾಗಗಳಲ್ಲಿ ಊಟದ ವ್ಯವಸ್ಥೆ ಇದ್ದು, ೨೦ ಸಾವಿರ ನಾನ್ ವೆಜ್,೫ ಸಾವಿರ ಜನಕ್ಕೆ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ
ಚಿಕ್ಕಮಗಳೂರಿನಿಂದ ಮುಂಜಾನೆ ೪ ಗಂಟೆಗೆ ೨ ಟನ್ ಚಿಕನ್ ಬರಲಿದೆ.
ಬೆಳಗ್ಗೆ ೧೧.೩೦ ರ ನಂತರ ಊಟ ಆರಂಭವಾಗಲಿದ್ದು , ಬೆಳಗ್ಗೆ ೧೦ ಗಂಟೆ ಒಳಗೆ ಮೆನು ಸಿದ್ಧವಿರಿಸುವಂತೆ ಸೂಚನೆಯನ್ನು ನೀಡಲಾಗಿದೆ.ಇನ್ನು ವೆಜ್ ಐಟಂಗಳನ್ನು ರಾತ್ರಿಯೇ ಮಾಡಿಡಲು ಅಡುಗೆ ಭಟ್ಟರು ಅಣಿಯಾಗುತ್ತಿದ್ದು ನಾಳೆ ಮುಂಜಾನೆ ನಾನ್ ವೆಜ್ ಅಡುಗೆ ಮಾಡಲಾಗುವುದಂತೆ.
ವೆಜ್ ಅಲ್ಲಿ ಮಸಾಲ ವಡೆ, ಗೀ ರೈಸ್, ಖರ್ಮಾ, ಆಲೂ ಕಬಾಬ್, ಅನ್ನ, ಅಕ್ಕಿ ಫಿರ್ನಿ ( ಪಾಯಸ), ಅನ್ನ ರಸಂ, ತರಕಾರಿ ಸಾಂಬಾರು, ಮಜ್ಜಿಗೆ, ಹಾಗೂ ನಾನ್ ವೆಜ್ ಅಲ್ಲಿ ಗೀ ರೈಸ್, ಚಿಕನ್ ಚಾಪ್ಸ್ ಅಥವಾ ಚಿಕನ್ ಸಾರು, ಕಬಾಬ್, ರೈಸ್, ಸಾಂಬಾರು, ರಸಂ ಐಟಂಗಳು ನಾಳಿನ ಮೆನುವಲ್ಲಿ ಲಭ್ಯವಿರಲಿದೆ.
ಒಟ್ಟಿನಲ್ಲಿ ಅಪ್ಪು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಕನ್ನಡಿಗರ ಮನದಲ್ಲಿ ಸದಾ ಅಜರಾಮರವಾಗಿರುತ್ತಾರೆ.
Kshetra Samachara
08/11/2021 10:24 pm