ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಅಪ್ಪು ಅಭಿನಯದ ರಾಜಕುಮಾರ ಸಿನಿಮಾವನ್ನು ಗೌಡಯ್ಯನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮರು ಬಿಡುಗಡೆಮಾಡಿ ಅಭಿಮಾನಿಗಳಿಗೆ ಫ್ರೀ ಶೋ ಇಡಲಾಗಿದೆ. ಬೆಳಗ್ಗೆ 7-30 ಕ್ಕೆ ಫಸ್ಟ್ ಶೋ ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನಗೊಂಡು ನಂತರದ ಎರಡು ಶೋಗಳಲ್ಲಿ ಭಜರಂಗಿ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಇನ್ನು ಅಪ್ಪುವನ್ನು ದೊಡ್ಡ ಪರದೆಯಲ್ಲಿ ಮತ್ತೊಮ್ಮೆ ನೋಡಲು ಥಿಯೇಟರ್ ಮುಂದೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ.
ಚಿತ್ರಮಂದಿರದಲ್ಲಿ 630 ಆಸನಗಳಿದ್ದು ಮೊದಲು ಬಂದವರಿಗಷ್ಟೇ ಸಿನಿಮಾ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ಒಂದೇ ದಿನ ಒಂದೇ ಥಿಯೇಟರ್ ನಲ್ಲಿ ಸಹೋದರರ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಅಪ್ಪು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ನಯ ,ವಿನಯತೆ ,ದಾನ, ಸಿನಿಮಾ ಮೂಲಕ ಸದಾ ಜೀವಂತವಾಗಿರುತ್ತಾರೆ.
Kshetra Samachara
01/11/2021 11:05 am