ಬೆಂಗಳೂರು: ನಾಳೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ರಕ್ರಿಯೆ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆಯಲು ಅಭಿಮಾನಿಳು ಕಂಠೀರವ ಕ್ರೀಡಾಂಗಣದತ್ತ ಓಡೋಡಿ ಬರುತ್ತಿದ್ದಾರೆ.
ಸಾಗರೋಪಾದಿಯಲ್ಲಿ ಕ್ರೀಡಾಂಗಣದತ್ತ ಬರುತ್ತಿರುವ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಎಲ್ಲಡೆ 'ಅಪ್ಪು'ಗೆ ಜೈಕಾರ ಕೂಗುತ್ತಿದ್ದಾರೆ. ಇನ್ನು ಪುನೀತ್ ಅಂತ್ಯ ಸಂಸ್ಕಾರದ ಸ್ಥಳದ ಕಡೆಗೆ ಕಿಕ್ಕಿರಿದು ಬರುತ್ತಿರುವ ಅಭಿಮಾನಿಗಳನ್ನು ನಾಳೆ ಬನ್ನಿ ಎಂದು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
Kshetra Samachara
30/10/2021 05:09 pm