ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿ ಪ್ರೇಮ ಜಾನೇದೋ ಚಿತ್ರಕ್ಕೆ ಮುಹೂರ್ತ, ಗಗನ್, ಸುರೇಖಾ ಚಿತ್ರದ ಕಥಾ ನಾಯಕ ನಾಯಕಿ

ದೊಡ್ಡಬಳ್ಳಾಪುರ : ನಗರದ ಸೋಮೇಶ್ವರ ದೇವಸ್ಥಾನದಲ್ಲಿ‌ ಪ್ರೀತಿ ಪ್ರೇಮ ಜಾನೇದೋ ಚಿತ್ರಕ್ಕೆ ಮುಹೂರ್ತ ನೆರವೇರಿತು.

ಹೊಸ ನಾಯಕ ನಟನಾಗಿ ಗಗನ್, ನಾಯಕ ನಟಿಯಾಗಿ ಸುರೇಖಾ ಅಭಿನಯದ ಈ ಚಿತ್ರಕ್ಕೆ ಪ್ರಸನ್ನ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಮ್ಯಾ ಪ್ರಸನ್ನ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎರಡನೇ ನಾಯಕಿಯಾಗಿ ಶಶಿಕಲಾ ಅಭಿನಯಿಸುತ್ತಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿ ಎಂಬುದು ನಾನಾ ಬಗೆಯಲ್ಲಿ ಅನುಭವಕ್ಕೆ ಬಂದಿರುತ್ತದೆ. ತಂದೆ-ತಾಯಿ, ಯುವಕ-ಯುವತಿ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಒಂದಲ್ಲಾ ಒಂದು ರೀತಿ ಪ್ರೀತಿ ಆವರಿಸಿರುತ್ತದೆ. ಪ್ರೀತಿ ಎಂಬ ವಿಷಯವನ್ನು ಎಲ್ಲ ಆಯಾಮಗಳಲ್ಲಿ ತೋರಿಸುವ ಸಾಮಾಜಿಕ ಸಂದೇಶ ಹೊಂದಿದೆ ಎಂದು ಚಿತ್ರದ ನಿರ್ದೇಶಕ ಪ್ರಸನ್ನ ತಿಳಿಸಿದರು.

ದೊಡ್ಡಬಳ್ಳಾಪುರ ಸುತ್ತಮುತ್ತ, ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ಚಿತ್ರೀಕರಣ ಮಾಡಲಾಗುವುದು. ಹಾಡುಗಳ ಚಿತ್ರೀಕರಣ ಹೊರ ರಾಜ್ಯ, ಜಿಲ್ಲೆಗಳಲ್ಲಿ ನಡೆಯಲಿದೆ. 2023 ಫೆಬ್ರುವರಿ 14 ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಚಿತ್ರಕ್ಕೆ ಪ್ರತಾಪ್ ಸಿಂಗರ್ ಸಾಹಿತ್ಯ ರಚಿಸಿದ್ದು, ಡ್ಯಾನಿಯಲ್ ಸಂಗೀತ ನೀಡಿದ್ದಾರೆ. ಯೋಗೇಶ್ ಅವರ ಕ್ಯಾಮೆರಾ ಕೈಚಳಕ ಇದೆ.

Edited By : PublicNext Desk
Kshetra Samachara

Kshetra Samachara

02/09/2022 06:10 pm

Cinque Terre

1.95 K

Cinque Terre

0

ಸಂಬಂಧಿತ ಸುದ್ದಿ