ದಿವಂಗತ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ಬೆಂಗಳೂರಿನ ರಸ್ತೆಗೆ ನಾಮಕರಣ ಮಾಡಲಾಗಿದ್ದು, ಅಪ್ಪುವಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೆಸರನ್ನು ರಸ್ತೆಗೆ ಇಡುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿರುವ ಬಿಬಿಎಂಪಿ ಬೆಂಗಳೂರಿನ ಒಂದು ಪ್ರಮುಖ ರಸ್ತೆಗೆ ಈಗ ಪುನೀತ್ ಹೆಸರಿಟ್ಟಿದೆ.
ಬೆಂಗಳೂರಿನ ಔಟರ್ ರಿಂಗ್ ರೋಡ್ ನ 12 ಕಿಲೋಮೀಟರ್ ಉದ್ದದ ರಸ್ತೆಗೆ ಈಗ ದಿವಂಗತ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಸಿಗ್ನಲ್ ನಿಂದ ಗೊರಗುಂಟೆ ಪಾಳ್ಯದ ಸಿಗ್ನಲ್ ವರೆಗೂ ಇರುವ ಈ ಔಟರ್ ರಿಂಗ್ ರೋಡ್ ಅನ್ನ ಇನ್ಮುಂದೆ ಪುನೀತ್ ರಾಜಕುಮಾರ್ ಹೆಸರಿನಿಂದಲೇ ಕರೆಯಲಾಗುತ್ತದೆ.
ಕರ್ನಾಟಕ ರತ್ನ ಡಾಕ್ಟರ್ ಪುನೀತರಾಜಕುಮಾರ ನಾಮಕರಣದ ರಸ್ತೆಯಲ್ಲಿ ನಮ್ಮ ಪ್ರತಿನಿಧಿ ನವೀನ್ ವಾಕ್ ಥ್ರೂ ಮಾಡಿದ್ದಾರೆ. ಅದು ಇಲ್ಲಿದೆ. ನೋಡಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
30/05/2022 07:20 pm