ಮಲ್ಲೆಶ್ವರಂ: ಇಂದು ದಸರಾ ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನೆರವೇರಿದೆ. ಶ್ರೀ ಅಣ್ಣಮ್ಮದೇವಿ ದೇವಸ್ಥಾನ , ಶರನ್ನವರಾತ್ರಿ ಮಹೋತ್ಸವ ನಡೆಯುತ್ತಿದ್ದು, ಕೋವಿಡ್ ಯಿಂದ ದೇವಸ್ಥಾನಗಳಲ್ಲಿ ಎರಡು ವರ್ಷಗಳಿಂದ ಭಕ್ತರಿಗೆ ಮಂಗಳಾರತಿ, ತೀರ್ಥ ಪ್ರಸಾದಗಳನ್ನು ನೀಡದೆ, ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.ಆದ್ರೆ ಈ ಬಾರಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಹೋಮ, ಹವನಗಳು, ಸೇರಿದಂತೆ ವಾಹನಗಳ ಪೂಜೆಯನ್ನು ಸಡಗರ, ಸಂಭ್ರಮದಿಂದ ಮಾಡಲಾಯ್ತು. ಮಂಗಳವಾರ ಮತ್ತು ಬುಧವಾರ (ಆಯುಧ ಪೂಜೆ ಮತ್ತು ವಿಜಯದಶಮಿ)ದಂದು ದೇವಾಲಯಗಳಿಗೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ಧತೆಗಳು ನಡೆದಿದೆ.
ದೇವಸ್ಥಾನದಲ್ಲಿ ಆಯುಧ ಪೂಜೆಯ ಪ್ರಯುಕ್ತ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುತ್ತಾರೆ. ಮಂಗಳವಾರ (ಆಯುಧಪೂಜೆ) ಬುಧವಾರ (ವಿಜಯದಶಮಿ)ಇರುವುದರಿಂದ ವಾಹನಗಳಿಗೆ ವಿಶೇಷವಾದ ಪೂಜೆ ನೆರವೇರಿಲಾಗುತ್ತದೆ.
PublicNext
04/10/2022 11:39 am