ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳ ಜ್ಞಾನಾರ್ಜನೆ ಮುಖ್ಯ, ಅನಿರ್ಧಿಷ್ಟಾವಧಿ ಧರಣಿ‌ ಕೈಬಿಡಿ..!

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಭೇಟಿಯಾಗಿ ವಸತಿ ಹಾಗೂ ಮೂಲಸೌಲಭ್ಯ ಸಚಿವ‌ ವಿ.ಸೋಮಣ್ಣ‌ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದರು.

ವಿದ್ಯಾರ್ಥಿಗಳ‌ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಕೋಲಾರದ ಹೆಣ್ಣುಮಗಳು ಶಿಲ್ಪಾ‌ ಬಸ್ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನನಗೆ ಎಲ್ಲಾ ಮಾಹಿತಿ ಸಿಕ್ಕಿದೆ. ಈ ರಸ್ತೆ ಬಂದ್ ಮಾಡಬೇಕು ಎಂದು ಒತ್ತಾಯ ಮಾಡಿದವರಲ್ಲಿ ನಾನು ಮೊದಲಿಗ ಎಂದರು.

ನಾನು ಕೂಡ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೂ ಖಾಸಗಿ ವಾಹನಗಳು ಹೆಚ್ಚಾಗಿ ಓಡಾಡುತ್ತಿರುವ ವಿಚಾರ ಗೊತ್ತಿದೆ.‌ ವಿಶ್ವವಿದ್ಯಾಲಯ ಅಂದರೆ ಜ್ಞಾನದೇಗುಲ, ಮಕ್ಕಳ ಜ್ಞಾನಾರ್ಜನೆ ಮುಖ್ಯ. ಹೀಗಾಗಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.‌

ಈ‌ ವಿಚಾರ ವಿದ್ಯಾರ್ಥಿಗಳ‌ ಬೇಡಿಕೆ‌ಯಲ್ಲ, ಅವಶ್ಯಕತೆ. ಅಕ್ಟೋಬರ್ 13 ರರವರೆಗೆ ಸಿಎಂ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರು ಬಂದ ಕೂಡಲೇ ಬೇಡಿಕೆ ಈಡೇರಿಸುವ ಕುರಿತು ಸಿಎಂ ರವರ ಜೊತೆ ಚರ್ಚಿಸಿ ಸಮಂಜಸವಾದ ತೀರ್ಮಾನ ಕೈಗೊಳ್ಳಲಾಗುವುದು. ಆದಷ್ಟು ಸಮಸ್ಯೆ ಪರಿಹರಿಸುವ‌ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

Edited By : Nagesh Gaonkar
PublicNext

PublicNext

11/10/2022 08:12 pm

Cinque Terre

28.04 K

Cinque Terre

0

ಸಂಬಂಧಿತ ಸುದ್ದಿ