ಬೆಂಗಳೂರು: ರಾಗಿ ಹೊಲದಲ್ಲಿ ಕಳೆ ನಾಶಕ ಸಿಂಪಡಣೆ ಮಾಡುವಾಗ, ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಸ್ವರ್ಶಿಸಿ ಯುವಕ ಸಾವನ್ನಪ್ಪಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊನ್ನಘಟ್ಟ ಗ್ರಾಮದ ಯುವಕ 34 ವರ್ಷದ ಜಗನ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಮೃತ ಜಗನ್ ಕುಮಾರ್ ಕೊಡಿಗೆಹಳ್ಳಿ ಗ್ರಾಮದಲ್ಲಿ 20 ಗುಂಟೆ ಜಮೀನು ಖರೀದಿ ಮಾಡಿದ್ರು, ಈ ಜಾಗದಲ್ಲಿ ರಾಗಿಯನ್ನ ಬೆಳೆದಿದ್ರು, ರಾಗಿ ಬೆಳೆಯಲ್ಲಿ ವಿಪರೀತ ಕಳೆ ಬೆಳೆದಿತ್ತು, ಇಂದು ಬೆಳಗ್ಗೆ ಕಳೆ ನಾಶಕ ಸಿಂಪರಣೆ ಮಾಡಲು ರಾಗಿ ಹೊಲಕ್ಕೆ ಬಂದಿದ್ರು, ಕಳೆ ನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಕೈಗೆಟುಕುವ ಎತ್ತರದಲ್ಲಿ 11 ಕೆ.ವಿ ವಿದ್ಯುತ್ ಲೈನ್ ಜಗನ್ ಕುಮಾರ್‌ಗೆ ತಗುಲಿದೆ. ವಿದ್ಯುತ್ ಸ್ವರ್ಶದಿಂದ ಜಗನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೊಲದಲ್ಲಿ ಹಾದು ಹೋಗಿದ್ದ 11 ಕೆವಿ ವಿದ್ಯುತ್ ಲೈನ್ ಸರಿಪಡಿಸುವಂತೆ ಹಲವು ಬಾರಿ ಬೆಸ್ಕಾಂ ಇಲಾಖೆಗೆ ಮನವಿ ಮಾಡಲಾಗಿತ್ತು, ಆದರೆ ಬೆಸ್ಕಾಂ ಇಲಾಖೆ ವಿದ್ಯುತ್ ಲೈನ್ ಸರಿಪಡಿಸದೆ ನಿರ್ಲಕ್ಷ್ಯತೆ ತೋರಿತು, ಬೆಸ್ಕಾಂ ನವರ ನಿರ್ಲಕ್ಷ್ಯತೆಯಿಂದ ಯುವಕನ ಸಾವಾಗಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
09/10/2022 01:54 pm