ಬೆಂಗಳೂರು: ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜ್ಯದಲ್ಲಿ ಜಾತಿ ಲೆಕ್ಕಾಚಾರ, ನಾಯಕರ ವರ್ಚಸ್ಸು ಟಿಕೆಟ್ ಫೈಟು ಎಲ್ಲಾ ಜೋರಗಿದೆ. ಹಳೇ ಮೈಸೂರು ಭಾಗದಲ್ಲಿ ಲಿಂಗಾಯತ ನಾಯಕರಿಲ್ಲದೆ ಕಂಗಾಲಾಗಿರುವ ಕಾಂಗ್ರೆಸ್ ಹಳೇ ಮೈಸೂರು ಭಾಗದಲ್ದಲಿ ಲಿಂಗಾಯತ ನಾಯರರನ್ನ ಬೆಳಸಿಲ್ಲ ಅನ್ನೋ ಆರೋಪ ಕೇಳಿ ಬರ್ತಿದೆ. ಇನ್ನೂ ಬೆಂಗಳೂರಿನ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್ ನಲ್ಲಿ ಲಿಂಗಾಯತ ನಾಯರೇ ಇಲ್ಲದಂತಾಗಿದೆ. ಸದ್ಯ ಬೆಂಗಳೂರಿನ ಲಿಂಗಾಯತ ಮುಖಂಡರು ಈ ಬಾರಿ ಚುನಾವಣೆಗೆ ಬೆಂಗಳೂರಲ್ಲಿ ಒಕ್ಕಲಿಗರಿಗೆ ಮಣೆ ಹಾಕಿ ಕೇವಲ ಎರಡು ಕ್ಷೇತ್ರವನ್ನಾದ್ರು ಲಿಂಗಾಯತರಿಗೆ ಕೊಡಿ ಅಂತ ಮನವಿ ಇಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ನಿಂದ ಸಚಿವ ವಿ.ಸೋಮಣ್ಣ ಬಿಜೆಪಿಗೆ ಹೋಸ್ಮೆಲೆ ಲಿಂಗಾಯ ಮುಖಗಳು ಇಲ್ಲದಂತಾಗಿದೆ. ಇನ್ನೂ ಹಿಂದೆ ಮೇಯರ್ ಆಗಿದ್ದ ಗಂಗಾಂಭಿಕ ಮಲ್ಲಿಕಾರ್ಜುನ್ ಹಾಗೂ ಉಪ ಮೇಯರ್ ಆಗಿದ್ದ ಬಿಎಸ್ ಪುಟ್ಟರಾಜುಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.
ಗಂಗಾಂಭಿಕ ಮಲ್ಲಿಕಾರ್ಜುನ ಚಿಕ್ಕಪೇಟೆ ಕ್ಷೇತ್ರದ ಆಕಾಂಷಿಯಾಗಿದ್ದು ಬಿ ಎಸ್ ಪುಟ್ಟರಾಜು ರಾಜಾಜಿನಗರದ ಆಕಾಂಷಿಯಾಗಿದ್ದಾರೆ. ಇನ್ನೂ ಚಿಕ್ಕಪೇಟೆ ಕೆಜಿಎಫ್ ಬಾಬು ಕೂಡ ಆಕಾಂಷಿಯಾಗಿದ್ದಾರೆ. ಇತ್ತ ರಾಜಾಜಿನಗರದಲ್ಲಿ ಕಳೆದ 20 ವರ್ಷದಿಂದ ಕಾಂಗ್ರೆಸ್ ಖಾತೆ ತೆರೆಯದು ಕ್ಲೋಸ್ ಆಗಿದ್ದು ಹಿಂದೆ ಮೇಯರ್ ಆಗಿದ್ದ ಪದ್ಮಾವತಿ ಎರಡು ಬಾರಿ ಸೋತಿದ್ದಾರೆ. ಈ ಬಾರಿ ಲಿಂಗಾಯತ ಸಮುದಾಯದ ಬಿಎಸ್ ಪುಟ್ಟರಾಜು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ, ಕಾಂಗ್ರಸ್ ನ ಭವ್ಯ ನರಸಿಂಹಮೂರ್ತಿ ಕೂಡ ಪ್ರಬಲ ಆಕಾಂಷಿಯಾಗಿದ್ದಾರೆ.
ಇನ್ನೂ ಜಾತಿ ಲೆಕ್ಕಾಚಾರ ನೋಡೋದಾದ್ರೆ ನಗರದ ಎಲ್ಲಾ ಕ್ಷೇತ್ರದಲ್ಲೂ ಲಿಂಗಾಯತರು 20-25 ಸಾವಿರ ಮತ ಹೊಂದಿ ನಿರ್ಣಾಯಕರಾಗಿದ್ದಾರೆ. ಒಟ್ಟಿನಲ್ಲಿ ಜಾತಿ ಲೆಕ್ಕಾಚಾರ ನೋಡೋದಾದ್ರೆ ಕಾಂಗ್ರೆಸ್ ಗೆ ಬೆಂಗಳೂರಂತ ನಗರದಲ್ಲಿ ಲಿಂಗಾಯತರ ಮತ ಅನಿವಾರ್ಯವಾಗಿದ್ದು ಕಾಂಗ್ರೆಸ್ ವರಿಷ್ಠರು ಯಾವ ಲೆಕ್ಕಾಚಾರ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು
ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
07/10/2022 07:26 pm