# ವಿಧಾನಸೌದ
ಬೆಂಗಳೂರು: ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ರಾಷ್ಟ್ರಪಿತಾ ಮಹಾತ್ಮಾ ಗಾಂಧಿ ಅವರ ಜನ್ಮದಿನ. ಗಾಂಧಿ ಅವರಿಗೆ ಭಕ್ತಿ ಭಾವದ ಸಮರ್ಪಣೆ ಮಾಡಿದೇವೆ. ಗಾಂಧಿ ಇಡೀ ದೇಶಕ್ಕೆ ಪ್ರೇರಣಾ ಶಕ್ತಿ. ಗಾಂಧಿ ತನ್ನ ಬದುಕಿನಲ್ಲಿ ಹತ್ತು ಹಲವಾರು ಅವಮಾನ ಸಹಿಸಿಕೊಂಡು ಹೋರಾಟ ಮಾಡಿದವರು. ದೇಶಕ್ಕಾಗಿ ತನ್ನ ಇಡೀ ಜೀವನವನ್ನೇ ಸಮರ್ಪಣೆ ಮಾಡಿದವರು.ಸ್ವಾತಂತ್ರ್ಯ ಹೊರಾಟಕ್ಕೆ ಹೊಸ ದಿಕ್ಸೂಚಿಯನ್ನು ಕೊಟ್ಟರು. ಸತ್ಯ ಅಹಿಂಸೆ ಎರಡು ಅಸ್ತ್ರ ಕೊಟ್ಟರು. ಈ ಅಸ್ತ್ರದಿಂದಲ್ಲೇ ಬ್ರಿಟಿಷ್ ಸಾಮ್ರಾಜ್ಯ ಅಲುಗಾಡಿದೆ. ಗಾಂಧಿ ಜೀ ಹೇಳಿದಂತೆ ಅವರ ಜೀವನ ತೆರದ ಪುಸ್ತಕ. ಗಾಂಧೀಜಿ ಅವರು ಸತ್ಯ ಅಹಿಂಸೆ ಮಾರ್ಗ ಕೊನೆವರೆಗು ಬಿಡಲಿಲ್ಲ. ಗಾಂಧಿ ಹೇಳಿದ ಹಲವು ವಿಚಾರಗಳು ದೇಶಕ್ಕೆ ಮಾದರಿ. ಗ್ರಾಮ ಸ್ವರಾಜ್ಯ ವಿಚಾರ ಮಾಡಿದವರು ಗಾಂಧಿ. ಅವರ ಮಾರ್ಗದಲ್ಲಿ ನಾವೆಲ್ಲ ಮುಂದುವರೆದರೆ ನಮ್ಮಗೆಲ್ಲ ಜೀವನದಲ್ಲಿ ಶಾಂತಿ ಸಿಗುತ್ತದೆ ಎಂದು ಹೇಳಿದ್ದಾರೆ.
PublicNext
02/10/2022 10:50 am