ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಜ್ಯದಲ್ಲಿ ಡಿಕೆಶಿ,ಸಿದ್ದರಾಮಯ್ಯ ಜೋಡಿಸೋ ಯಾತ್ರೆ ನಡೀತಿದೆ: ಸಚಿವ ನಾರಾಯಣಸ್ವಾಮಿ

ಆನೇಕಲ್: ಕರ್ನಾಟಕದಲ್ಲಿ ನಡೀತಿರೋದು ಭಾರತ್ ಜೋಡೋ ಯಾತ್ರೆಯಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡಿಸೋ ಯಾತ್ರೆ ಎಂದು ಸಚಿವ ಎ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಹುಸ್ಕೂರ್ ಮದ್ದೂರಮ್ಮ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನಕಲ್ಯಾಣ ಯೋಜನೆಗಳ ಪ್ರಚಾರ ಮತ್ತು ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ನಾನು ಬಹಳ ಚೆನ್ನಾಗಿ ನೋಡುತ್ತಿರುತ್ತೇನೆ. ರಾಹುಲ್ ಗಾಂಧಿಯವರ ಜೋಡೋಯಾತ್ರೆ ನಡೀತಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡಣೆ ಮಾಡೋದು ಹೆಂಗೆ ಅಂತ ಯಾತ್ರೆ ನಡೆದಿದೆ ಅಷ್ಟೇ ಅಂತ ಸಚಿವ ವ್ಯಂಗ್ಯವಾಡಿದ್ದಾರೆ.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರನ್ನು ಆಯ್ಕೆ ಮಾಡಿರೋದು ತುಂಬಾ ಖುಷಿ ವಿಚಾರ. ನಮ್ಮ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಬೇಕಾಗಿದ್ದ ಅರ್ಹತೆ ಇದ್ದಂತಹ ವ್ಯಕ್ತಿ. ಆದ್ರೆ ಕಾಂಗ್ರೆಸ್ನವರು ಅವಕಾಶ ಕೊಟ್ಟಿಲ್ಲ. ಇದೀಗ ಅವರ ಹಿರಿತನವನ್ನು ಗುರುತಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಸ್ವಾಗತ ಎಂದು ತಿಳಿಸಿದರು.

Edited By : Shivu K
PublicNext

PublicNext

01/10/2022 06:53 pm

Cinque Terre

42.08 K

Cinque Terre

3

ಸಂಬಂಧಿತ ಸುದ್ದಿ