ಆನೇಕಲ್: ಸಾರ್ವಜನಿಕ ಆಸ್ಪತ್ರೆಯ ದುರ್ವ್ಯವಸ್ಥೆ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನ ಖಂಡಿಸಿ ಆನೇಕಲ್ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಕರ್ನಾಟಕ ರಿಪಬ್ಲಿಕ್ ಸೇನೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.. ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು
ಇದೇ ವೇಳೆ ಕರ್ನಾಟಕ ರಿಪಬ್ಲಿಕ್ ಸೇನೆ ಜಿಗಣಿ ಶಂಕರ್ ಮಾತನಾಡಿ, ಹೆರಿಗೆಗೆ ಬರುವ ರೋಗಿಗಳ ಬಳಿ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ.ಇದೇನ ಪ್ರೊಡಕ್ಷನ್ ಕಂಪನಿನಾ ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರೋದಿಲ್ಲ. ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಒಂದು ವರ್ಷದಿಂದ ಕಾಲಿ ಬಿದ್ದಿದೆ ಅದನ್ನು ಭರ್ತಿ ಮಾಡಿಕೊಂಡಿಲ್ಲ, ಸಾಕಷ್ಟು ಸಮಸ್ಯೆಗಳು ಇವೆ, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಮಾಡಲಿ ಎಂದು ಜಿಗಣಿ ಶಂಕರ್ ಆಗ್ರಹ ಮಾಡಿದ್ರು
ಕರ್ನಾಟಕ ರಿಪಬ್ಲಿಕ್ ಸೇನೆಯ ಸಂಘಟನೆಯ ರವಿ ಕಜಮಾರ್ ಮಾತನಾಡಿ ಆನೇಕಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ರೋಗಿಗಳ ಬಳಿ 5000 ಲಂಚ ಪಡೆದುಕೊಳ್ಳುತ್ತಿದ್ದಾರೆ . ಆನೇಕಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿಲ್ಲ ಆಂಬುಲೆನ್ಸ್ ಸಮಸ್ಯೆ ಇದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲ ಸ್ವಚ್ಛತೆ ಇಲ್ಲ ಬ್ಲಡ್ ಬ್ಯಾಂಕ್ ಇಲ್ಲ ಆನೇಕಲ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವತಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದ್ರು.
PublicNext
29/09/2022 05:21 pm