ಯಲಹಂಕ: ಕೇಂದ್ರ ಸರ್ಕಾರ ದೇಶದ್ರೋಹಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಕ್ರಮವನ್ನು ನಾವೆಲ್ಲಾ ಸ್ವಾಗತಿಸುತ್ತೇವೆ. ದೇಶವನ್ನು ಅಸ್ಥಿರಗೊಳಿಸುತ್ತಾ, ದೇಶದ್ರೋಹಿ ಕೆಲಸ ಮಾಡುತ್ತಿದ್ದ ಸಂಘಟನೆಯ ನಿಷೇಧ ಮಾಡಿರುವುದನ್ನು ದೇಶಪ್ರೇಮಿಗಳು ಸ್ವಾಗತಿಸಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ಪಿಎಫ್ಐ ಸಂಘಟನೆಯ ಮತ್ತೊಂದು ಮುಖ. ಓಟಿಗಾಗಿ ಒಂದು ಸಮೂದಾಯ ಮತ್ತು ಪಿಎಫ್ಐ ಬೆಂಬಲಿಸುತ್ತಾ ಬಂದಿದ್ದ ಸಿದ್ದರಾಮಯ್ಯ ಈಗ ನಿಷೇಧ ಮಾಡಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದರಿಂದ ದೇಶಪ್ರೇಮಿ ಯಾರು.!? ದೇಶದ್ರೋಹಿ ಯಾರು ಎಂಬುದು ಗೊತ್ತಾಗ್ತಿದೆ ಎಂದು ಮಾತಿನಲ್ಲೇ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಯಲಹಂಕದಲ್ಲಿ ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯಿಸಿ ನೇರವಾಗೆ ಕುಟುಕಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್..
PublicNext
28/09/2022 10:47 pm