ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 4G ಯಿಂದ 5Gಗೆ ಅಪ್ಡೇಟ್ ಮಾಡ್ತಿವಿ ಅಂತ ನಿಮ್ಮ ಖಾತೆಗೆ ಕನ್ನ ಹಾಕಬಹುದು ಹುಷಾರ್!

ಪೊಲೀಸ್ ಕಮಿಷನರ್ ಕಚೇರಿ :ಒಂದು ಕಡೆ ದೇಶದಲ್ಲಿ ಮೊಬೈಲ್ ನೆಟ್ವರ್ಕ್ 4G ಯಿಂದ 5Gಗೆ ಅಪ್ಡೇಟ್ ಆಗಿದೆ. ಈಗಾಗ್ಲೆ ಕೆಲವೊಂದು ಆಯ್ದ ನಗರದಲ್ಲಿ ಪ್ರಾಯೋಗಿಕವಾಗಿ 5G ನೆಟ್ವರ್ಕ್ ಕೆಲಸ ಮಾಡ್ತಿದೆ. ಈ ಮದ್ಯೆ ಜನ ಕೂಡ 4Gಯಿಂದ 5Gಗೆ ತಮ್ಮ ನೆಟ್ವರ್ಕ್ ಅಪ್ಡೇಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೆ ಬಂಡವಾಳ‌ ಮಾಡಿಕೊಂಡಿರೋ ಸೈಬರ್ ಖದೀಮರು ಅಪ್ಡೇಟ್ ಹೆಸ್ರಲ್ಲಿ ಸುಲಿಗೆ ಮಾಡೋ ಕೆಲಸಕ್ಕೆ ಮುಂದಾಗಿದ್ದಾರೆ ‌.

ಸೈಬರ್ ವಂಚಕರ ತಂಡ 5G ವಂಚನೆಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಹಾಗೂ ಸಿಸಿಬಿ ಹೊಸ ವಂಚನೆ ತಡೆಯಲು ಜಾಗೃತಿ ಮೂಡಿಸ್ತಿದೆ.

ಕಾಲ್ ಸೆಂಟರ್‌ಗಳಿಂದ ಕರೆ ಮಾಡುವ ಮೂಲಕ ಹೊಸ ವಂಚನೆಗೆ ಸಿದ್ಧವಾಗ್ತಿರೋ ವಂಚಕರ ಗ್ಯಾಂಗ್, ಏರ್‌ಟೆಲ್, ಜಿಯೋ ಸೇರಿದಂತೆ ಹಲವು 5Gಗೆ ನಿಮ್ಮ ಸಿಮ್ ಅಪ್ಡೇಟ್ ಮಾಡ್ತಿವಿ ಎಂದು ಕರೆ ಮಾಡ್ತಾರೆ. ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳಿ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದ್ರೆ ಮುಗೀತು ಕ್ಷಣಾರ್ದದಲ್ಲಿ ನಿಮ್ಮ ಖಾತೆಯಲ್ಲಿನ ಹಣವನ್ನ ಗುಳುಂ ಆಗುತ್ತೆ.

ಈ ಕಾರಣದಿಂದ ಸಿಸಿಬಿ ಮತ್ತು ಸೆನ್ ಪೊಲೀಸ್ರು ಜಾಗೃತಿ ಮೂಡಿಸ್ತಿದ್ದು, ಯಾವೂದೇ ಅಪ್ಡೇಟ್ ಇದ್ರೂ ಅದನ್ನ ಸಂಬಂಧಪಟ್ಟ ನೆಟ್ವರ್ಕ್ ಕಚೇರಿಗಳಲ್ಲೆ ಮಾಡಿಸಿ, ಸುಖಾ ಸುಮ್ಮನೆ ಒಟಿಪಿ ಹೇಳಿ ಪೇಚಿಗೆಸಿಲಕದಂತೆ ಮನವಿ ಮಾಡಿದ್ದರೆ. ಒಂದು ವೇಳೆ ಅಂತಹ ಕರೆ ಬಂದ್ರೆ ಅಥವಾ ವಂಚನೆಯಾದ್ರೆ ತಕ್ಷಣ122ಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

10/10/2022 04:35 pm

Cinque Terre

29.25 K

Cinque Terre

0

ಸಂಬಂಧಿತ ಸುದ್ದಿ