ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಆಕಾಶ್ ಇಂಟರ್ನ್ಯಾಷನಲ್ ಆಸ್ಪತ್ರೆ ಕರೋನಾ ಸಂಕಷ್ಟದ ವೇಳೆ ಆಸ್ಪತ್ರೆಯನ್ನು ಕರೋನಾ ರೋಗಿಗಳಿಗೆ ನೀಡಿ ಸ್ಪಂದಿಸಿದ್ದಕ್ಕೆ ಅಭಿನಂಧನೆ ಸಲ್ಲಿಸಿದರು. ಇಂದು ಆಕಾಶ್ ಆಸ್ಪತ್ರೆಲಿ 119ಜನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಪದವಿ ಪ್ರಧಾನ ಮಾಡಿದರು.
ಕರೋನಾ ಸಂಕಷ್ಟದಲ್ಲಿ ಶ್ರಮಿಸಿದ ವಿದ್ಯಾರ್ಥಿಗಳು ಮತ್ತು ಆಕಾಶ್ ಆಸ್ವತ್ರೆ ಬೆಂಗಳೂರಿಗೆ ವರದಾನವಾಗಿ ಸ್ವಂದಿಸಿದೆ. ವಿದ್ಯಾರ್ಥಿಗಳು ಮತ್ತು ಆಸ್ಪತ್ರೆ ರೋಗಿಗಳ ಸೇವೆ ಮಾಡಿದ ಶ್ರಮವನ್ನು ಸಿ.ಎಂ.ಸ್ಮರಿಸಿದರು.
ದೇವನಹಳ್ಳಿಯ ಆಕಾಶ್ ಮೇಡಿಕಲ್ ಕಾಲೇಜಿನ ಮೊದಲ ಬ್ಯಾಚ್ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿ ವಿದ್ಯಾರ್ಥಿಗಳನ್ನ ಹುರಿದುಂಬಿಸಿದರು. ಇಂತಹ ಕಾರ್ಯಕ್ರಮ ಯಶಸ್ವಿಯಾಗುವುದು ಕಾಲೇಜ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಎಂದು ಗಣ್ಯರು ತಿಳಿಸಿದರು.
ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಕಾಲೇಜ್ ಸಿಬ್ಬಂದಿ ಭಾವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
19/09/2022 08:12 am