ಬೆಂಗಳೂರು: ಕೆಂಗೇರಿ ಸರ್ಕಾರಿ ಆಸ್ಪತ್ರೆಯ ಹಗರಣದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ಹಾಗೇ ಈ ಆಸ್ಪತ್ರೆಯಲ್ಲಿ ಬಡವರ ಹಣವನ್ನು ತಿನ್ನೋದಲ್ಲದೆ, ಬೇಕಾಬಿಟ್ಟಿ ತಪಾಸಣೆಯನ್ನೂ ನಡೆಸುತ್ತಿದ್ದಾರೆ!
ಆಸ್ಪತ್ರೆ ಪೂರ್ತಿಯೂ ಗಲೀಜು. ಒಂದು ಕಡೆ ಕಸ ಹಾಕುವ ಬುಟ್ಟಿ, ಪಕ್ಕದಲ್ಲೇ ಕುಡಿಯುವ ನೀರಿನ ಘಟಕ. ಯಾವುದೇ ಗೋಡೆ ಮೇಲೆ ನೋಡಿದ್ರೂ ಜನ್ರು ಉಗ್ದಿರೋದು, ಮಳೆನೀರು ಸುರಿದು ಹಾಳಾಗಿರೋದೇ ಕಾಣುತ್ತೆ.
ಈ ಆಸ್ಪತ್ರೆ ಎರಡು ಅಂತಸ್ತಿನದ್ದು. ಎಲ್ಲದರಲ್ಲೂ ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ಟಾಯ್ಲೆಟ್ ಗಳು ಇವೆ. ಆದ್ರೆ, ಎಲ್ಲಾ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ! ಈ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು, ಅವರ ಸಂಬಂಧಿಕರು ಬರ್ತಾರೆ. ಆದ್ರೆ, ಅವರೆಲ್ಲರಿಗೂ ಒಂದೇ ಶೌಚಾಲಯ ಇರೋದು. ಆಸ್ಪತ್ರೆಯ ಸ್ಟಾಫ್ ಯೂಸ್ ಮಾಡುವ ಶೌಚಾಲಯ ಮಾತ್ರ ಶುಚಿಯಾಗಿದೆ. ಅದೇ ರೋಗಿಗಳು ಬಳಸುವ ಶೌಚಾಲಯ ಗಬ್ಬೆದ್ದು ಹೋಗಿದೆ. ಈ ಶೌಚಾಲಯದಿಂದಲೇ ಸಾಂಕ್ರಾಮಿಕ ಕಾಯಿಲೆ ಬರೋದು ಗ್ಯಾರಂಟಿ!
ಇಷ್ಟೆಲ್ಲ ಅವ್ಯವಸ್ಥೆಯ ಆಗರವಾಗಿರೋ ಕೆಂಗೇರಿ ಸರ್ಕಾರಿ ಆಸ್ಪತ್ರೆ ಬಿಬಿಎಂಪಿ ಅಂಡರ್ ನಲ್ಲಿ ಬರುತ್ತಂತೆ. ಒಂದು ದಿವಸಕ್ಕೆ ಆದ್ರೂ ಹೆಲ್ತ್ ಡಿಪಾರ್ಟ್ ಮೆಂಟ್ ನಿಂದ ಪರಿಶೀಲನೆ ನಡೆಸೋದಿಲ್ವ!? ಇದರಲ್ಲೂ ಅಧಿಕಾರಿಗಳ ಶಾಮೀಲಾತಿ ಇದ್ಯಾ? ಒಟ್ಟಿನಲ್ಲಿ ಸರಕಾರಿ ಆಸ್ಪತ್ರೆ ಸುತ್ತ ಅನುಮಾನಗಳ ಹುತ್ತವೇ ಎದ್ದು ಕಾಣ್ತಿದೆ. ಇದೆಲ್ಲದರ ಹಿಂದೆ ಯಾರಿದ್ದಾರೆ? ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಾಸ್ತಿ, ಆಸ್ಪತ್ರೆ ಕ್ಲೀನ್ ಆಗಿ ಸಾರ್ವಜನಿಕರಿಗೆ ಸುವ್ಯವಸ್ಥಿತ ಸರ್ಕಾರಿ ಆಸ್ಪತ್ರೆಯಾಗುವ ವರೆಗೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ಭ್ರಷ್ಟತೆಯ ಜಾಡು ಹಿಡಿದು ಹೋಗೋದಂತೂ ಗ್ಯಾರಂಟಿ.
- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
18/09/2022 02:00 pm