ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಿಕ್ಕಮಗಳೂರಿನಿಂದ ಏರ್‌ಲಿಫ್ಟ್ ಮೂಲಕ ಮಣಿಪಾಲ ಆಸ್ಪತ್ರೆ ಸೇರಿದ 'ಹೃದಯ'

ಬೆಂಗಳೂರು: ಬಸ್‌ನಿಂದ ಕೆಳಗೆ ಬಿದ್ದು ಸಾವಿನ ದವಡೆಗೆ ಸಿಲುಕಿದ್ದ ಚಿಕ್ಕಮಂಗಳೂರಿನ ರಕ್ಷಿತಾ ಅಂಗಾಂಗವನ್ನ ಕುಟುಂಬದವರು ದಾನ ಮಾಡಿದ್ದಾರೆ. ಈ ಹಿನ್ನೆಲೆ ಇಂದು ರಕ್ಷಿತಾ ಹೃದಯವನ್ನು ICATT ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.

ಚಿಕ್ಕಮಂಗಳೂರಿನ ಐಡಿಎಸ್ ಜಿ ಮೈದಾನದ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿ ಸಾಗಿಸಲಾಯಿತು. ಚಿಕ್ಕಮಗಳೂರು ಆಸ್ಪತ್ರೆ ಅಪರೇಷನ್ ಥಿಯೇಟರ್‌ನಿಂದ ಮಣಿಪಲ್ ಆಸ್ಪತ್ರೆ ಥಿಯೇಟರ್ ಕೇವಲ 88 ನಿಮಿಷಗಳಲ್ಲಿ ಅಂಗವನ್ನು ವರ್ಗಾಯಿಸಲಾಯಿತು. ಇನ್ನು ಚಿಕ್ಕಮಗಳೂರಿನಲ್ಲಿ ಇದೇ ಮೊದಲ ಬಾರಿಗೆ ಏರ್ ಲಿಫ್ಟ್ ಮೂಲಕ ಅಂಗಾಂಗ ರವಾನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯರು, ಪೊಲೀಸರು ಸಹಕಾರ ನೀಡಿದ್ದು ಆಸ್ಪತ್ರೆಯಿಂದ ಹೆಲಿಪ್ಯಾಡ್ ವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು.

Edited By : Nagesh Gaonkar
PublicNext

PublicNext

22/09/2022 07:10 pm

Cinque Terre

43.05 K

Cinque Terre

1

ಸಂಬಂಧಿತ ಸುದ್ದಿ