ಘಾಟಿಸುಬ್ರಮಣ್ಯ, ಮಾಕಳಿ ಮತ್ತು ಹುಲುಕುಡಿ ಬೆಟ್ಟದ ಸಾಲಿನ ಮಣ್ಣಿನ ದಿಬ್ಬಗಳಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮೋಹನಕುಮಾರಿ, ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಸಾಗುವಳಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ದಲ್ಲಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಬಯಲುಸೀಮೆಯ ನಾಡಿನಲ್ಲಿದ್ರೂ, ನಂದಿಬೆಟ್ಟ, ಘಾಟಿ ಸುಬ್ರಮಣ್ಯ, ಮಾಕಳಿ ಮತ್ತು ಹುಲುಕುಡಿ ಬೆಟ್ಟದ ಸಾಲುಗಳು ಅರೆಮಲೆನಾಡಿನ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ ಇತ್ತೀಚೆಗೆ ಬೆಟ್ಟದ ಸಾಲಿನ ಮಣ್ಣಿನ ದಿಬ್ಬಗಳು ಕರಗುತ್ತಿವೆ. ಹೆದ್ದಾರಿ ಕಾಮಗಾರಿ ಮತ್ತು ಬೆಂಗಳೂರು ನಗರಕ್ಕೆ ಇಲ್ಲಿನ ದಿಬ್ಬಗಳಿಂದ ಅಕ್ರಮವಾಗಿ ಮಣ್ಣು ಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮೋಹನಕುಮಾರಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಎಫ್ ಐಆರ್ ದಾಖಲಿಸಿ ಕ್ರಮ ತೆಗೆದು ಕೊಳ್ಳುವಂತೆ ಕಂದಾಯ ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಿದರು.
ಕೃಷಿ ಮಾಡುವ ಕಾರಣಕ್ಕೆ ಸರ್ಕಾರದಿಂದ ರೈತರಿಗೆ ಜಮೀನು ಮಂಜೂರು ಮಾಡಲಾಗುತ್ತಿದೆ. ಆದರೆ ಕೆಲವು ರೈತರು ಜಮೀನನ್ನ ಕೃಷಿಯೋಗ್ಯ ಭೂಮಿಯನ್ನಾಗಿ ಸಮತಟ್ಟು ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಸಾಗುವಳಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದವರ ಬಗ್ಗೆ ಉಪ ವಿಭಾಗಾಧಿಕಾರಿಯವರಿಗೆ ವರದಿ ಕಳಿಸಿ ರೈತರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನ ನೀಡಿದ್ದಾರೆ ತಹಶೀಲ್ದಾರ್ ಮೋಹನಕುಮಾರಿ.
PublicNext
01/10/2022 05:28 pm