ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಕೊರಿಯರ್ ಮೂಲಕ ಬೆಲ್ಜಿಯಂ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪಾರ್ಸೆಲ್ ಬಂದಿತ್ತು. ಎಕ್ಸ್ ರೇ ರೀತಿ ಪಾರ್ಸೆಲ್ ಮಾಡಿ ಕಾರ್ಗೋಗೆ ಸ್ಮಗ್ಲರ್ಸ್ ಕಳುಹಿಸಿದ್ದರು.
ಕಾರ್ಗೋ ವಿಭಾಗದಲ್ಲಿ ಪಾರ್ಸೆಲ್ ಕಂಡು ಅನುಮಾನಗೊಂಡಿದ್ದ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ
76.2 ಲಕ್ಷ ಮೌಲ್ಯದ 2 ಕೆಜಿ ತೂಕದ 5080 ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
ಪಾರ್ಸಲ್ ತೆಗೆದುಕೊಳ್ಳಲು ಬರೋ ಸ್ಮಗ್ಲರ್ಸ್ ಗೆ ಅಧಿಕಾರಿಗಳು ಕಾಯುತ್ತಿದ್ದರು. ಈ ವೇಳೆ ಪಾರ್ಸಲ್ ರಿಸೀವ್ ಮಾಡಿಕೊಳ್ಳಲು ಬಂದಿದ್ದ ಮಹಿಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ವಿಚಾರಣೆಗೆ ಮುಂದಾಗ್ತಿದ್ದಂತೆಯೇ ಏರ್ ಪೋರ್ಟ್ ನಿಂದ ಎಸ್ಕೇಪ್ ಆಗಲು ಮಹಿಳೆ ಯತ್ನ ನಡೆಸಿದ್ದಾರೆ. ಈ ವೇಳೆ ಚೇಸ್ ಮಾಡಿ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಿಕ್ಕಿಬಿದ್ದಿರೋ ಮಹಿಳೆ ವೈಟ್ ಫೀಲ್ಡ್ ಬಳಿಯ ಅಂತಾರಾಷ್ಟ್ರೀಯ ಶಾಲೆಯ ಸ್ವಿಮ್ಮಿಂಗ್ ಕೋಚ್ ಆಗಿ ಕೆಲಸ ಮಾಡ್ತಿದ್ದಳು. ಕೊರಿಯರ್ ನಲ್ಲಿ ಬಂದಿದ್ದ 76.2 ಲಕ್ಷ ಮೌಲ್ಯದ 2 ಕೆಜಿ ತೂಕದ 5080 ಎಂಡಿಎಂಎ ಮಾತ್ರೆಗಳನ್ನ ಕಸ್ಟಮ್ಸ್ ಅಧಿಕಾರಗಳು ಸೀಜ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
PublicNext
07/10/2022 10:51 am