ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಯುವಕರಿಗೆ ಪಾರ್ಟ್ ಟೈಮ್ ಕೆಲಸ ಕೊಡಿಸುವ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಚೀನಾ ಮೂಲದ ಕಂಪೆನಿಗೆ ಇಡಿ ಶಾಕ್ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಕಡೆಗಳಲ್ಲಿ ದಾಳಿ ಮಾಡಿದ ಇಡಿ 5.85 ಕೋಟಿ ರೂ.ವನ್ನು ಜಪ್ತಿ ಮಾಡಿದೆ. ವಾಟ್ಸಾಪ್ ಹಾಗೂ ಟೆಲಿಗ್ರಾಂ ಮುಖಾಂತರ ನಿರುದ್ಯೋಗಿಗಳಿಗೆ ಕೆಲಸದ ಆಮಿಷವೊಡ್ಡುತ್ತಿದ್ದ ಕೀಪ್ ಶೇರ್ ಕಂಪನಿ ಯುವಕರನ್ನ ತಮ್ಮತ್ತ ಸೆಳೆದುಕೊಂಡು ನೋಂದಣಿ ಶುಲ್ಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು.
ಸೆಲೆಬ್ರಿಟಿ ವಿಡಿಯೋ ಶೇರ್ ಮಾಡುವ ಕೆಲಸವನ್ನು ಉದ್ಯೋಗಿಗಳಿಗೆ ನೀಡುತಿತ್ತು. ಆರಂಭದಲ್ಲಿ ಪ್ರತಿ ವಿಡಿಯೋ 20 ರೂ. ನೀಡುತ್ತಿತ್ತು. ಕೆಲವು ದಿನಗಳ ಬಳಿಕ ಗೂಗಲ್ ಪ್ಲೇ ಸ್ಟೋರ್‌ನಿಂದ ಕೀಪ್ ಶೇರ್ ಆ್ಯಪ್ ಕಾಣೆಯಾಗಿತ್ತು. ಬಳಕೆದಾರರಿಂದ ಪಡೆದ ಹಣವನ್ನ ಬೆಂಗಳೂರು ಮೂಲದ ಕೆಲ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಲಾಗಿತ್ತು. ಚೀನಾ ಮೂಲದ ಖಾತೆಗಳಿಗೆ ಕ್ರಿಪ್ಟೋ ರೂಪದಲ್ಲಿ ಕಂಪೆನಿಯು ಹಣ ವರ್ಗಾಯಿಸಿಕೊಂಡಿತ್ತು. ಈ ಸಂಬಂಧ ನಗರ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು 92 ಜನರ ವಿರುದ್ಧ ಪೊಲೀಸರು ಪ್ರಕರಣ ಕೂಡ ದಾಖಲಾಗಿತ್ತು.
92 ಮಂದಿ ಆರೋಪಿಗಳ ಪೈಕಿ ಪ್ರಮುಖ 6 ಮಂದಿ ಆರೋಪಿಗಳು ಚೀನಾ ಹಾಗೂ ತೈವಾನ್ ಮೂಲದವರಾಗಿದ್ದಾರೆ. ವಿದೇಶಿ ಹಣ ವರ್ಗಾವಣೆ ಪತ್ತೆ ಹಿನ್ನೆಲೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ಕಂಪೆನಿಗೆ ಸಂಬಂಧಿಸಿದ 12 ಕಡೆಗಳಲ್ಲಿ ದಾಳಿ ನಡೆಸಿ 5.85 ಕೋಟಿ ರೂಪಾಯಿಯನ್ನ ಜಪ್ತಿ ಮಾಡಿದೆ.
Kshetra Samachara
04/10/2022 11:18 am