ಬೆಂಗಳೂರು: ಮೊದಲು ಪರಿಚಯ, ನಂತರ ಗೆಳೆತನ. ಇಷ್ಟಾದ ಮೇಲೆ ಸೀದಾ ಮನೆಗೆ ಬಂದು ಮನೆಯ ಕೀಯನ್ನು ನಕಲಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡು ಕಳ್ಳತನ. ಹೀಗೆ ಸ್ನೇಹಿತೆಯ ಮನೆ ದೋಚಿದ್ದ ಚಾಲಕಿ ಕಳ್ಳಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಚಲಾಕಿ ಅನಿತಾ ಸ್ನೇಹಿತೆಯ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಕಳ್ಳತನ ಮಾಡಲು ಈಕೆ ಡಿಫರೆಂಟ್ ಆಗಿರುವ ಫ್ಲ್ಯಾನ್ ಮಾಡಿಕೊಳ್ಳುತ್ತಿದ್ದಳು. ಮೊದಲಿಗೆ ಅಪರಚಿತರನ್ನು ತನ್ನ ಮಾತಿನ ಮೋಡಿ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಕಳ್ಳತನಕ್ಕೆ ಸ್ಕೇಚ್ ರೆಡಿ ಮಾಡಿ ಪರಿಚಯವಾದರ ಮನೆಗೆ ಹೋಗಿದ್ದಳು. ನಂತರ ಮನೆ ಬೀಗದ ಕೈಯನ್ನು ನಕಲು ಮಾಡಿಕೊಂಡಿದ್ದಳು. ನಂತರ ಪರಿಚಯವಾದವರ ಆಸಕ್ತಿ ಹಾಗೂ ಇಷ್ಟಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿ ಪಾರ್ಟಿ ಇಷ್ಟ ಆದ್ರೆ ಪಾರ್ಟಿ ಪಾಸ್, ಸಿನಿಮಾ ಇಷ್ಟ ಆದ್ರೆ ಸಿನಿಮಾದ ಟಿಕೆಟ್ ಕೊಟ್ಟು ಮನೆಯಿಂದ ಹೊರ ಹೋಗುವಂತೆ ಮಾಡಿದ್ದಳು. ಹೀಗೆ ಮನೆಯಯವರು ಹೊರಗೆ ಹೋದ ತಕ್ಷಣ ನಕಲಿ ಕೀ ಬಳಸಿ ಮನೆಯಲ್ಲಿರುವ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು.
ಸದ್ಯ ಚಿನ್ನಾಭರಣ ಕಳೆದುಕೊಂಡವರು ನೀಡಿದ ದೂರಿನ ಮೇಲೆ ಕಾರ್ಯ ಪ್ರವೃತ್ತರಾದ ಪೊಲೀಸರು ವಂಚಕಿಯನ್ನ ಬಂಧಿಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ವಂಚಕಿ ಬಸವೇಶ್ವರನಗರ ಸೇರಿದಂತೆ ನಗರದ ಇತರೆ ಭಾಗಗಳಲ್ಲಿಯೂ ಕಳವು ಮಾಡಿರುವ ಕುರಿತು ತನಿಖೆ ಮುಂದುವರೆಯುತ್ತಿದೆ.
PublicNext
28/09/2022 06:25 pm