ಬೆಂಗಳೂರು : ರಾಜ್ಯದ್ಯಾಂತ ಪಿಎಫ್ಐ ಕಾರ್ಯಕರ್ತರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.ಕೆಜಿ ಹಳ್ಳಿಯಲ್ಲಿ ಪಿಎಫ್ ಐ ಕಾರ್ಯಕರ್ತರ ಮೇಲೆ ಎಫ್ ಐ ಆರ್ ನಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಪಿಎಫ್ ಮುಖಂಡರು ಕಾರ್ಯಕರ್ತರಿಗೆ ಹರಿತವಾದ ಆಯುದಗಳನ್ನ ಹೇಗೆ ಬಳಸಬೇಕು ಎಂದು ಟ್ರೈನಿಂಗ್ ನೀಡ್ತಿದ್ರಂತೆ.
ವೇಣುಗೋಪಾಲ್ ನೀಡಿರುವ ದೂರಿನಲ್ಲಿ ಈ ಅಂಶವನ್ನ ಉಲ್ಲೇಖಿಸಿದ್ದು, ಈ ರೀತಿ ತರಬೇತಿ ಪಡೆದ ಯುವಕರಿಂದ ಧರ್ಮಾಧಾರಿತ ವ್ಯಕ್ತಿಗಳ ಹತ್ಯೆಗೆ ಪ್ಲಾನ್ ಮಾಡಲಾಗ್ತಿತ್ತು ಎಂದು ದೂರಿದ್ದಾರೆ.ಅಲ್ಲದೇ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಪಿತೂರಿ ಮಾಡುತ್ತಿರುವ ಆರೋಪ ಕೂಡ ಮಾಡಲಾಗಿದೆ.
ಹಿಂಸಾತ್ಮಕ ಸಿದ್ದಾಂತಗಳನ್ನ ಇಟ್ಟುಕೊಂಡು ಯುವಕರನ್ನ ಪಿಎಫ್ ಐ ಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನೂ ಇತ್ತಿಚೇಗೆ ದೇಶ ಮತ್ತು ರಾಜ್ಯದಲ್ಲಿ ಆದ ಬೆಳವಣಿಗೆ ಹಿನ್ನೆಲೆ ಈ ತರಬೇತಿ ನೀಡಿರುವ ಬಗ್ಗೆ ಅನುಮಾಯ ವ್ಯಕ್ತವಾಗಿದೆ. ಅಲ್ಲದೆ ಕೆಲ ಅನ್ಯಕೋಮಿನ ಕಾರ್ಯಕರ್ತರ ಹತ್ಯೆಗೂ ಸಂಚೂ ರೂಪಿಸಿರುವ ಶಂಕೆ ವ್ಯಕ್ತವಾಗಿದೆ.
Kshetra Samachara
27/09/2022 10:36 am