ನೆಲಮಂಗಲ : ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಗ್ರಾಮಾಂತರದ ಭಾಗದಲ್ಲೂ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿವೆ. ಅದರಲ್ಲೂ ಇಷ್ಟು ದಿನ ಮನೆ ಮುಂದೆ ನಿಲ್ಲಿಸಿದ ಬೈಕ್, ಕಾರು, ಮನೆಗಳ್ಳತನ, ಸರಣಿ ಅಂಗಡಿ ಕಳ್ಳತನ ಮಾಡುತ್ತಿದ್ದ ಕಳ್ಳರ ಕಣ್ಣು ಈಗ ದೇವಾಲಯಗಳ ಹುಂಡಿ ಮೇಲೆ ಬಿದ್ದಿದೆ. ಅದಕ್ಕೆ ಸಾಕ್ಷಿ ಎಂಬಂತೆ ತಡರಾತ್ರಿ ಗ್ರಾಮದ ಎರಡು ದೇವಾಲಯಗಳ ಬಾಗಿಲ ಬೀಗ ಒಡೆದು ಹುಂಡಿಯಲ್ಲಿದ್ದ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಹೌದು ತಡರಾತ್ರಿ ನೆಲಮಂಗಲ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ಒಮ್ಮೇಲೆ ಗ್ರಾಮ ದೇವತೆಗಳಾದ ಶ್ರೀಮಾರಮ್ಮ ದೇವಿ ಹಾಗೂ ವೀರ ಮಾಸ್ತಮ್ಮ ದೇವಾಲಯಗಳ ಬೀಗ ಹೊಡೆದು ಹುಂಡಿ ಹಣ ದೋಚಿದ್ದಾರೆ. ಈ ಪೈಕಿ ಕಳೆದ 6 ವರ್ಷಗಳಿಂದ ಮತ್ತು ಕೊರೊನಾ ಕಾರಣದಿಂದಾಗಿ ಕಳೆದ 3 ವರ್ಷಗಳಿಂದ ದೇವಸ್ಥಾನದ ಜಾತ್ರೆ ಆಚರಣೆ ಮಾಡಿರಲಿಲ್ಲ.
ಹೀಗಾಗಿ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನೆರವೇರದ ಹಿನ್ನಲೆ ಹುಂಡಿಯಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹವಾಗಿದ್ದು, ಈ ಬಾರಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೆರವೇರಿಸಲು ಮುಂದಾಗಿದ್ದ ಗ್ರಾಮಸ್ಥರಿಗೆ ಹುಂಡಿ ಹಣ ದೋಚಿದ ಕಳ್ಳರು ಬಿಗ್ ಶಾಕ್ ಕೊಟ್ಟಿದ್ದಾರೆ. ಈ ಸಂಬಂಧ ಸ್ಥಳಕ್ಕಾಮಿಸಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಪರಿಶೀಲನೆ ನೆಡೆಸಿದ್ದಾರೆ.
ಇಷ್ಟು ದಿನ ಮನೆಗಳ್ಳತನ ಅಂಗಡಿ ಕಳ್ಳತನ ಮಾಡುತ್ತಿದ್ದ ಕಳ್ಳರು ದೇವಾಲಯದ ಹುಂಡಿ ಹಣದ ಜೊತೆ ದೇವರ ಮೈಮೇಲಿನ ಚಿನ್ನಾಭರಣವನ್ನು ಕೂಡ ಕದ್ದೊಯ್ದಿದ್ದರು. ಈ ಸಂಬಂಧ ಇನ್ನಾದರೂ ಪೊಲೀಸರು ಸೂಕ್ತವಾದ ಕ್ರಮಕೈಗೊಂಡು ಕಟ್ಟೆಚರ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದು ಮುಂದೆ ಏನಾಗುತ್ತೋ ಏನೋ ಅನ್ನೋ ಆತಂಕದಲ್ಲಿದ್ದಾರೆ. ಈ ಘಟನೆ ಕುರಿತಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಮುಂದಾಗಿದ್ದಾರೆ.
ಒಟ್ಟಾರೆ ನೆಲಮಂಗಲ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿದ್ರೂ ಪೊಲೀಸರು ನಿದ್ದೆಗೆ ಜಾರಿದ್ದಾರಾ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದ್ದು, ಇನ್ನಾದರೂ ಪೊಲೀಸರು ಎಚ್ಚೆತ್ತು ಆದಷ್ಟು ಕ್ರೈಂಗಳಿಗೆ ಕಡಿವಾಣ ಹಾಕ್ತಾರೋ ಇಲ್ವೋ ಎನ್ನುವುದನ್ನು ಕಾದು ನೋಡಬೇಕಿದೆ.
ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
PublicNext
19/09/2022 10:46 pm