ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಯಿ ಬೊಗಳಿದಕ್ಕೆ ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದ ಪಾಪಿ

ದೊಡ್ಡಬಳ್ಳಾಪುರ: ನಾಯಿ ಬೊಗಳಿದ್ದಕ್ಕೆ ಕ್ರೋಧಗೊಂಡ ಪಾಪಿ ನಾಡ ಬಂದೂಕಿನಿಂದ ಗುಂಡಿಕ್ಕಿ ನಾಯಿಯನ್ನು ಕೊಂದಿದ್ದಾನೆ, ರಕ್ಕಸನ ಅರ್ಭಟಕ್ಕೆ 5 ವರ್ಷದ ರಾಕಿ ಹೆಸರಿನ ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ.

ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು. ಘಟನೆಯಲ್ಲಿ ಹರೀಶ್‌ರವರು 5 ವರ್ಷದ ನಾಯಿ ರಾಕಿ ಗುಂಡೇಟಿಗೆ ಸಾವನ್ನಪ್ಪಿದೆ. ದುರುಳ ಕೃಷ್ಣಪ್ಪ ಆರ್ಭಟಕ್ಕೆ ಮೂಕ ಪ್ರಾಣಿಯೊಂದು ಬಲಿಯಾಗಿದೆ.

ಹರೀಶ್‌ರವರು ತಮ್ಮ ಸಹೋದರಿ ನೀಡಿದ ನಾಯಿ ರಾಕಿಯನ್ನ ಬಹಳ ಮುದ್ದಿನಿಂದ ಸಾಕಿದ್ರು. ಇವತ್ತಿನವರೆಗೂ ಯಾರ ತಂಟೆಗೂ ಹೋಗಿರಲಿಲ್ಲ. ಮತ್ತು ಯಾರಿಗೂ ಕಚ್ಚಿರಲಿಲ್ಲ, ನಾಯಿಯ ಮೂಕ ಪ್ರೀತಿಗೆ ಗ್ರಾಮಸ್ಥರು ಸಹ ಮನಸೋತಿದ್ದರು. ಗ್ರಾಮದಲ್ಲಿ ಹಂದಿಸಾಕಾಣಿಕೆ ಮಾಡುತ್ತಿದ್ದ ಕೃಷ್ಣಪ್ಪ ಸಹ ಏಳೆಂಟು ನಾಯಿ ಸಾಕಿದ್ದಾನೆ. ಆದರೆ ಇಂದು ನಾಯಿ ರಾಕಿ ತನ್ನನ್ನು ನೋಡಿ ಬೊಗಳಿತ್ತೆಂದು ಹಂದಿ ಬೇಟೆಗೆ ಬಳಸುವ ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನ ರಾಗಿ ಹೊಲದಲ್ಲಿ ಅಟ್ಟಾಡಿಸಿಕೊಂಡು ಶೂಟ್ ಮಾಡಿದ್ದಾನೆ. ಏಳೆಂಟು ಗುಂಡೇಟು ತಿಂದ ರಾಕಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಕೃಷ್ಣಪ್ಪನ ಬಳಿ ಎರಡು ಮೂರು ಬಂದೂಕುಗಳಿವೆ. ಆದರೆ ಯಾವ ಬಂದೂಕಿಗೆ ಲೈಸೆನ್ಸ್ ಇಲ್ಲ. ನಾಯಿ ಕೊಂದಿದ್ಯಾಕೆಂದು ಕೇಳಲು ಹೋದ್ರೆ ದರ್ಪದ ಮಾತನಾಡಿದ್ದಾನೆ. ಕೊನೆಗೆ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್‌ನ ಸಹಾಯವನ್ನ ಹರೀಶ್ ಕೇಳಿದ್ದಾರೆ ಟ್ರಸ್ಟ್‌ನ ಸಹಾಯದಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೊಡ್ಡಬಳ್ಳಾಪುರ ಪಶು ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಾಯಿಯ ದೇಹದಲ್ಲಿ 7ರಿಂದ 8 ಗುಂಡೇಟುಗಳಿವೆ. ರಕ್ತ ಒಳಸ್ರಾವದಿಂದ ನಾಯಿ ಮೃತಪಟ್ಟಿದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಕ್ರೂರಿ ಕೃಷ್ಣಪ್ಪ ಅಟ್ಟಹಾಸಕ್ಕೆ ಮೂಕ ಪ್ರಾಣಿ ಬಲಿಯಾಗಿದೆ. ಆತನಿಗೆ ನಿದರ್ಶನೀಯ ಶಿಕ್ಷೆ ಆಗಬೇಕೆಂಬುದು ನಾಯಿ ಕಳೆದುಕೊಂಡ ಹರೀಶ್ ಅವರ ಒತ್ತಾಯವಾಗಿದೆ.

Edited By : Shivu K
PublicNext

PublicNext

18/09/2022 11:51 am

Cinque Terre

31.2 K

Cinque Terre

0

ಸಂಬಂಧಿತ ಸುದ್ದಿ