ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಸರಾ ಹಬ್ಬದ ಸಂಭ್ರಮದಲ್ಲಿದ್ದ ಮನೆಯವರಿಗೆ ಕಳ್ಳರಿಂದ ಬಿಗ್ ಶಾಕ್..!!

ಆನೇಕಲ್: ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಥಳಿ ರಸ್ತೆಯಲ್ಲಿ ನಡೆದಿದೆ. ಇನ್ನೂ ಕಳ್ಳರ ಕೈಚಳಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲೋಕೇಶ್ ಎಂಬಾತರ ಮನೆಯಲ್ಲಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ದಸರಾ ಹಬ್ಬದ ಸಂಭ್ರಮದಲ್ಲಿದ್ದ ಮನೆಯವರು ಪೂಜೆ ಸಲ್ಲಿಸಿ ಬೀಗ ಹಾಕಿ ಹೊರಹೋಗಿದ್ರು. ಆ ವೇಳೆ ಕಳ್ಳರ ಗ್ಯಾಂಗ್ ರಾಡ್‌ಗಳನ್ನು ಹಿಡಿದು ಮನೆಯ ಒಳಗೆ ನುಗ್ಗಿದ್ದಾರೆ. ಒಬ್ಬಾತ ರಾಡ್‌ನಿಂದ ಬಾಗಿಲು ಒಡೆದು ಮನೆ ಒಳಗೆ ನುಗ್ಗಿದ್ದಾನೆ. ಇನ್ನೊಬ್ಬ ಹೊರಗೆ ಯಾರು ಬರುತ್ತಾರೆ ಎನ್ನುವುದನ್ನು ವಾಚ್ ಮಾಡಿದ್ದಾನೆ. ಎರಡು ರಾಡ್‌ನಿಂದ ಬಾಗಿಲು ಒಡೆದು ಒಳಗೆ ಬರುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

04/10/2022 10:47 pm

Cinque Terre

37.65 K

Cinque Terre

1

ಸಂಬಂಧಿತ ಸುದ್ದಿ