ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ತನಿಖೆಯಲ್ಲಿ ಅನಾವರಣಗೊಂಡ ಪಿಎಫ್‌ಐ ಬಂಧಿತರ ಸಂಚಿನ ರಹಸ್ಯ

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಸೃಷ್ಟಿಗೆ ಸಂಚು ರೂಪಿಸಿದ್ದ ಪಿಎಫ್ಐ ನಾಯಕರ ಸ್ಫೋಟಕ ಸ್ಕೆಚ್ ಒಂದಾದ್ಮೇಲೆ ಒಂದರಂತೆ ಬೆಳಕಿಗೆ ಬರುತ್ತಿದೆ. ಆರೋಪಿಗಳನ್ನ ತೀವ್ರ ವಿಚಾರಣೆಗೊಳಪಡಿಸಿರೋ ಪೊಲೀಸರ ಮುಂದೆ ಆರೋಪಿಗಳು ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.

ದಾಳಿ ವೇಳೆ ಸಿಕ್ಕಿದ್ದ ಡೈರಿಯಲ್ಲಿ ಉಲ್ಲೇಖವಾಗಿದ್ದ training to be organised ಎಂಬ ವಾಕ್ಯದ ರಹಸ್ಯ ಭೇದಿಸಲು ಹೊರಟ ಪೊಲೀಸರು ಕೊನೆಗೂ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. training to be organised ಎಂಬ ಪದ ಕಂಡ ಪೊಲೀಸರಿಗೆ ಎಲ್ಲಿ ಯಾವ ರೀತಿ, ಯಾರಿಗೆ ಟ್ರೈನಿಂಗ್ ಕೊಡ್ತಿದ್ರು ಎನ್ನುವ ಮಾಹಿತಿ ಇಲ್ಲದೇ ಹೈರಾಣಾಗಿದ್ರು. ಬಳಿಕ ಸಿಕ್ಕ ಮಾಹಿತಿ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸ್ರು ಆರೋಪಿಗಳು ನೀಡ್ತಿದ್ದ ಟ್ರೈನಿಂಗ್ ಎಂತಹದ್ದು ಅನ್ನೋದನ್ನ ಕಂಡು ಶಾಕ್ ಆಗಿದ್ದಾರೆ.

ಸದ್ಯ ಪೊಲೀಸ್ರ ಕಸ್ಟಡಿಯಲ್ಲಿರೋ ಆರೋಪಿಗಳು ರಾಜ್ಯದ ವಿವಿಧೆಡೆ ಯುವಕರನ್ನ ತಮ್ಮ ಸಂಘಟನೆಯತ್ತ ಸೆಳೆದು ತರಬೇತಿ ನೀಡ್ತಿದ್ರು. ಆರಂಭದಲ್ಲಿ ಯೋಗ, ಇಸ್ಲಾಮಿಕ್ ಧರ್ಮ ಬೋಧಿಸಲಾಗಿತ್ತು ಎಂದು ಹೇಳ್ತಿದ್ದ ಆರೋಪಿಗಳು ಕೊನೆಗೆ ಪೊಲೀಸ್ರ ಮುಂದೆ ತಾವು ನೀಡ್ತಿದ್ದ ತರಬೇತಿ ಬಗ್ಗೆ ತುಟಿ ಪಿಟುಕ್ ಅನ್ನದೇ ಒಪ್ಪಿಕೊಂಡಿದ್ದಾರೆ. ಆರೋಪಿಗಳು ತಮ್ಮ ಉದ್ದೇಶದಂತೆ ಹಿಂದುತ್ವ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತಗಳ ವಿರುದ್ಧ ಯುವಕರಿಗೆ ಪಾಠ ಮಾಡ್ತಿದ್ರು. ಅದ್ರಲ್ಲೂ ಕೆಲ ಹಿಂದೂ ನಾಯಕರ ಫೋಟೋಗಳನ್ನ ಸಂಗ್ರಹಿಸಿದ್ದ ಆರೋಪಿಗಳು ಅವ್ರ ಮೇಲೆ ಅಟ್ಯಾಕ್ ಮಾಡುವ ಬಗ್ಗೆ ತರಬೇತಿ ನೀಡ್ತಿದ್ರು.

ಮೊದಲಿಗೆ ಪಿಎಫ್‌ಐನಲ್ಲಿ ಕೆಲ ದಿನಗಳ ಕಾಲ ಯುವಕರನ್ನು ಗುರುತಿಸಲಾಗುತ್ತಿತ್ತು. ಬಳಿಕ ಅವರ ಪೂರ್ವಾಪರ ಪರಿಶೀಲನೆ ನಡೆಸಲಾಗ್ತಿತ್ತು. ನಂತರ ಆಯ್ಕೆಯಾದ ಯುವಕರನ್ನು ವಿಟ್ಲಾ ಸಮೀಪದ ಮಿತ್ತೂರಿಗೆ ಹಾಗೂ ಗುಲ್ಬರ್ಗಕ್ಕೆ ಕಳಿಸಲಾಗುತ್ತಿತ್ತು. ಇನ್ನು ತರಬೇತಿಗೆ ಹೋಗೋ ಯುವಕರು ಸರ್ಕಾರಿ ಬಸ್‌ಗಳಲ್ಲೇ ಹೊಗಬೇಕು, ಮೊಬೈಲ್‌ಗಳನ್ನ ತೆಗೆದುಕೊಂಡು ಹೋಗುವಂತೆ ಇರಲಿಲ್ಲ. ಹಾಗೆ ಹೋದ ಯುವಕರ ಮಾನಸಿಕ ಹಾಗೂ ದೈಹಿಕ ಪಿಟ್‌ನೆಸ್ ಚೆಕ್ ಮಾಡಿ ಅವರಿಗೆ ಟಾರ್ಗೆಟ್ ಮಾಡಿದ ವ್ಯಕ್ತಿಗಳಿಗೆ ಸಾಕ್ಷಿ ಉಳಿಸದೇ ಹತ್ಯೆ ಮಾಡುವ ತಂತ್ರಗಳನ್ನ ತರಬೇತಿ ನೀಡ್ತಿದ್ದರೆಂದು ತಿಳಿದು ಬಂದಿದೆ.

ಸದ್ಯ ಆರೋಪಿಗಳಿಂದ ಸ್ಫೋಟಕ ಮಾಹಿತಿ ಕಲೆ ಹಾಕಿರೋ ಪೊಲೀಸ್ರ ಸ್ಪೆಷಲ್ ಟೀಂ ಗಳು ಆರೋಪಿಗಳಿಂದ ಮತ್ತಷ್ಟು‌ಮಾಹಿತಿ ಕಲೆ ಹಾಕೋದಕ್ಕೆ ತನಿಖೆ ಮುಂದುವರೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

01/10/2022 06:11 pm

Cinque Terre

4.07 K

Cinque Terre

0