ಬೆಂಗಳೂರು:ಮೊಬೈಲ್ ಫೋನ್ ಕಳ್ಳತನ ತಡೆಗೆ ಪೊಲೀಸರ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆ್ಯಪ್ ಮೂಲಕ ಮೊಬೈಲ್ ಕಳ್ಳರಿಗೆ ಶಾಕ್ ನೀಡಲು ಖಾಕಿ ಶಾಕ್ ನೀಡಲು ಮುಂದಾಗಿದ್ದಾರೆ. ಈ ಪ್ಲಾನ್ ನಿಂದ ಇನ್ನುಮುಂದೆ ಮೊಬೈಲ್ ಕದ್ರು ಅದು ಯೂಸ್ ಆಗಲ್ಲ.ಮೊಬೈಲ್ ಫೋನ್ ಕಳ್ಳತನ ತಡೆಯಲು ಬೆಂಗಳೂರು ಪೊಲೀಸ್ರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಿಇಐಆರ್ ಆ್ಯಪ್ ಮೂಲಕ ಮೊಬೈಲ್ ಫೋನ್ ಕಳ್ಳತನ ತಡೆಯಲು ಯೋಜನೆ ರೂಪಿಸಲಾಗಿದೆ.
ಇದೇ ಮೊದಲ ಬಾರಿಗೆ ನಗರದಲ್ಲಿ ಸಿಇಐಆರ್ ಆ್ಯಪ್ ಬಳಕೆಗೆ ಒತ್ತು ನೀಡಿದ್ದು, ಕೇಂದ್ರ ಸರ್ಕಾರ ನಿರ್ಮಿತ ಸಿಇಐಆರ್ ಆ್ಯಪ್ ಇದಾಗಿದ್ದು,ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಈ ಆ್ಯಪ್ ನ ಡೆವಲಪ್ ಮಾಡಿದೆ. ಮೊಬೈಲ್ ಕಳ್ಳತನವಾದ ಬಳಿಕ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಬೇಕು.ಇ-ಲಾಸ್ಟ್ ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೇರವಾಗಿ ಸಿಇಐಆರ್ ಆ್ಯಪ್ ಗೆ ಮಾಹಿತಿ ರವಾನೆಯಾಗಿ,
ಕೂಡಲೇ ಸಿಇಐಆರ್ ಆ್ಯಪ್ ಮೂಲಕ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಆಗುತ್ತೆ. ಆದ್ರೆ ಇ ಲಾಸ್ಟ್ ನಲ್ಲಿ ನಿಮ್ಮ ಮೊಬೈಲ್ ಐಎಂಇಐ ಸಂಖ್ಯೆ ನಮೂದಿಸುವುದು ಕಡ್ಡಯವಾಗಿದೆ.
ನೊಂದಾಯಿತ ಐಎಂಇಐ ಸಂಖ್ಯೆಯ ಮೊಬೈಲ್ ನ್ನ ಸಂಪೂರ್ಣ ಬ್ಲಾಕ್ ಮಾಡಲಿರೋ ಸಿಇಐಆರ್ ಆ್ಯಪ್ ಮೊಬೈಲ್ ಮತ್ತೆ ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸದಂತೆ ಮೊಬೈಲ್ ನ ಬ್ಲಾಕ್ ಮಾಡುತ್ತೆ.
ಈ ಮೂಲಕ ಮೊಬೈಲ್ ಕಳ್ಳತನಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರ ಯೋಜನೆ ರೂಪಿಸಿದ್ದಾರೆ. ಇನ್ನೂ ಕಳ್ಳತನವಾದ ಮೊಬೈಲ್ ಫೋನ್ ಆನ್ ಆದ ಕೂಡಲೇ ಲೋಕೇಷನ್ ಕೂಡ ಪತ್ತೆಯಾಗಿತ್ತೆ.ಸದ್ಯ ದೇಶದ ಎರಡು ಮಹಾನಗರಗಳಾದ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿಮಾತ್ರ ಬಳಕೆಯಾಗ್ತಿದೆ.ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಹೆಚ್ಚಾದ ಮೊಬೈಲ್ ಕಳ್ಳತನ ಹೆಚ್ಚಾಗಿದ್ದು,ದಿನವೊಂದಕ್ಕೆ ಸರಾಸರಿ 20 ರಿಂದ 30 ಮೊಬೈಲ್ ಕಳ್ಳತನವಾಗ್ತಿರೋದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.ಅದ್ರಿಂದ ಮೊಬೈಲ್ ಕಳ್ಳತನ ತಡೆಗೆ ಬೆಂಗಳೂರು ಪೊಲೀಸ್ರು ಸಿಇಐಆರ್ ಆ್ಯಪ್ ಮೊರೆ ಹೋಗಿದ್ದಾರೆ.ಈಗಾಗಲೇ ನಿನ್ನೆಯಿಂದ ಪ್ರಾಯೋಗಿಕವಾಗಿ ಆ್ಯಪ್ ಬಳಕೆ ಕಾರ್ಯಾರಂಭವಾಗಿದೆ.
ಇನ್ನೂ ಕಳ್ಳರು ಈ ರೀತಿ ಬ್ಲಾಕ್ ಆಗೋ ಮೊಬೈಲ್ ಫೋನ್ ಬಿಡಿಭಾಗಗಳಾಗಿ ಮಾರಾಟ ಮಾಡಿದ್ರೆ ಪತ್ತೆಕಾರ್ಯ ಅಸಾಧ್ಯ ಎನ್ನಲಾಗ್ತಿದೆ.
PublicNext
18/09/2022 10:50 am