ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದ ಖತರ್ನಾಕ್ ಗ್ಯಾಂಗನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡೆನಿಸ್, ಬಿಪಿನ್ ಸೇರಿ ಐವರು ಆರೋಪಿಗಳನ್ನ ಜೈಲಿಗಟ್ಟಲಾಗಿದ್ದು, ಇವರು SIP trunk line ಡಿವೈಸ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು!
ಕೋರಮಂಗಲದ ಬಿಜ್ ಹಬ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ ನ 1500 ಸಿಪ್ ಪೋರ್ಟಲ್ ಸಂಪರ್ಕ ಪಡೆದು 40 ದಿನಗಳಲ್ಲಿ ಒಟ್ಟು 68 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಯನ್ನು ಸ್ಥಳೀಯ ಕರೆಯಾಗಿ ಮಾರ್ಪಡಿಸಿದ್ದರು. ಅಂತೆಯೇ ಮೈಕೋ ಲೇಔಟ್ ನ ಆರ್ಚರ್ ಟೆಕ್ನಾಲಜಿಯಿಂದ 900 ಸಿಪ್ ಪೋರ್ಟಲ್ ಸಂಪರ್ಕ ಪಡೆದು 60 ದಿನಗಳಲ್ಲಿ ಬರೋಬ್ಬರಿ 24 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಟು ಮಾಡಿದ್ದರು.
ಟೈಮ್ ಇನ್ಫೋ ಟೆಕ್ನಾಲಜಿ ಎಂಬ ಕಂಪನಿ ತೆರೆದು ವಂಚಿಸಿದ್ದರು. ಸದ್ಯ ಆರೋಪಿಗಳು ಬಳಸುತ್ತಿದ್ದ ಪಿಆರ್ ಐ ಡಿವೈಸ್ 1 ನಿಮಿಷಕ್ಕೆ ಲಕ್ಷಾಂತರ ಕಾಲ್ ಗಳನ್ನ ಇಂಟರ್ ನೇಷನಲ್ ಕಾಲ್ ಗಳನ್ನ ಲೋಕಲ್ ಕಾಲ್ ಗಳಾಗಿ ಪರಿವರ್ತಿಸಲಾಗ್ತಿತ್ತು. ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ವಿಓಐಪಿ(ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್) ಕಾಲ್ ಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು.
ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲ್ ನ್ನ ಬೇರೆ ಸರ್ವರ್ ಗೆ ಕಳುಹಿಸಿ ಇಂಟರ್ನೆಟ್ ಸಹಾಯದಿಂದ ಕಾಲ್ ಗಳನ್ನ ಕನ್ವರ್ಟ್ ಮಾಡುತ್ತಿದ್ದರು. ಟೂರಿಸಂ ಕಸ್ಟಮರ್ ಕೇರ್ ಮಾಡುತ್ತೇವೆ ಎಂದು ಕಂಪನಿ ತೆರೆದು ವಂಚಿಸಿದ್ದ ಆರೋಪಿಗಳು ಸದ್ಯ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.
PublicNext
14/09/2022 04:58 pm