", "articleSection": "Crime,Law and Order,Accident,News", "image": { "@type": "ImageObject", "url": "https://prod.cdn.publicnext.com/s3fs-public/421698-1737700984-V1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "HarishAnekal" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಆನೇಕಲ್ : ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಯಲ್ಲಿ ಹಾಕಿದ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಆಗಿರುವಂತ ದಾರುಣ ಘಟನೆ ಬೆಂ...Read more" } ", "keywords": ",Bangalore,Bangalore-Rural,Crime,Law-and-Order,Accident,News", "url": "https://publicnext.com/article/nid/Bangalore/Bangalore-Rural/Crime/Law-and-Order/Accident/News" } ಆನೇಕಲ್ : ಮಗುವಿನ ದೃಷ್ಟಿ ತೆಗೆದ ನೀರಿಗೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಮಗುವಿನ ದೃಷ್ಟಿ ತೆಗೆದ ನೀರಿಗೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!

ಆನೇಕಲ್ : ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಯಲ್ಲಿ ಹಾಕಿದ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಆಗಿರುವಂತ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ದೊಡ್ಡ ಹಾಗಡೆ ಗ್ರಾಮದಲ್ಲಿ ನಡೆದಿದೆ. ದೊಡ್ಡಹಾಗಡೆ ಗ್ರಾಮದ ರಾಮಚಂದ್ರಪ್ಪ ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ರಾಮಚಂದ್ರಪ್ಪ ಪತ್ನಿ ರತ್ನಮ್ಮ ಮತ್ತು ನೆರೆಮನೆಯ ನಿವಾಸಿಗಳಾದ ಮುನಿರತ್ನಂ ಮತ್ತು ನವ್ಯ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳಕ್ಕೆ ಪ್ರಮುಖವಾಗಿ ಕಾರಣ ಆರತಿ ನೀರನ್ನು ತಂದು ರಸ್ತೆಯಲ್ಲಿ ಹಾಕಿದ್ದಕ್ಕೆ ರಾಮಚಂದ್ರಪ್ಪ ಪತ್ನಿ ರತ್ನಮ್ಮ ಪ್ರಶ್ನೆ ಮಾಡಿದ್ದಾರೆ.

ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ನೂಕಾಟ- ತಳ್ಳಲಾಟ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ರಾಮಚಂದ್ರಪ್ಪ ಗಲಾಟೆಯನ್ನು ಬಿಡಿಸಲು ಹೋಗಿದ್ದಾಗ ರಾಮಚಂದ್ರಪ್ಪರನ್ನು ತಳ್ಳಿದ್ದಾರೆ. ಆ ಕೂಡಲೇ ರಾಮಚಂದ್ರಪ್ಪ ಕುಸಿದು ಬಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಗಲಾಟೆ ವಿಚಾರದಲ್ಲಿ ಆಗಿದ್ದ ಕಾರಣಕ್ಕೆ ಅವರಿಗೆ ಚಿಕಿತ್ಸೆಯನ್ನು ನಿರಾಕರಣೆ ಮಾಡಿದ್ದಾರೆ. ಬಳಿಕ ಚಂದಾಪುರ ನಾರಾಯಣ ಹೃದಯಾಲಯಕ್ಕೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ರಾಮಚಂದ್ರಪ್ಪ ಮೃತಪಟ್ಟಿದ್ದಾರೆ.

Edited By : Suman K
Kshetra Samachara

Kshetra Samachara

24/01/2025 12:13 pm

Cinque Terre

2.63 K

Cinque Terre

0

ಸಂಬಂಧಿತ ಸುದ್ದಿ