ನೆಲಮಂಗಲ: ಹಸು ಮೇಯಿಸುತ್ತಿದ್ದ ವೃದ್ಧಗೆ ವಿದ್ಯುತ್ ಪಸರಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲ್ಲೂಕಿನ ಬೀರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇನ್ನು ಗ್ರಾಮದ ರಾಮಲಕ್ಷ್ಮಮ್ಮ 60 ವರ್ಷ ಮೃತ ವೃದ್ಧೆಯಾಗಿದ್ದು ಹಸುಗಳನ್ನ ಮೇಯಿಸುತ್ತಿದ್ದ ವೇಳೆ ಕಂಬದಿಂದ ವಿದ್ಯುತ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಪಿನ್ ಇನ್ಸೂಲೇಟರ್ ಕಳಚಿ ತಂತಿ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿದ್ದು, ಘಟನೆಗೆ ಬೆಸ್ಕಾಂ ಅಧಿಕಾರಿ ಸಿಬ್ಬಂದಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
31/07/2022 02:37 pm