ಬೆಂಗಳೂರು : ಸಂಜೆ ಸುರಿದ ಭಾರಿ ಮಳೆಗೆ ಕೋರಮಂಗಲ ಫಸ್ಟ್ ಬ್ಲಾಕ್ ನಲ್ಲಿ ಮನೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬಿಎಂಡಬ್ಲ್ಯೂ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಅದೃಷ್ಟವಶ ಮರ ಬಿದ್ದಾಗ ಕಾರಿನ ಪಕ್ಕದಲ್ಲಿದ್ದ ಸೆಕ್ಯೂರಿಟಿ ಕ್ಯಾಬಿನ್ ನಲ್ಲಿ ಇದ್ದ ಸೆಕ್ಯೂರಿಟಿ ಪಾರಾಗಿದ್ದಾನೆ.
ಮತ್ತು ಕೋರಮಂಗಲ ಫಸ್ಟ್ ಬ್ಲಾಕ್ ನಲ್ಲಿ ರಸ್ತೆಯ ಮೇಲೆ ನಿಂತಿದ್ದ ಆಂಬುಲೆನ್ಸ್ ಮೇಲೆ ಮರ ಬಿದ್ದಿದೆ.ಮತ್ತು ಹಲವಾರು ಟು ವೀಲರ್ ಗಳು ಮರದ ಕೆಳಗಡೆ ಸಿಲುಕಿದೆ. ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
08/05/2022 09:13 pm