ನೆಲಮಂಗಲ: ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಅತೀ ವೇಗವಾಗಿ ಬಂದ ಕ್ರೇನ್ ವಾಹನವೊಂದು ಹರಿದು ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲ್ಲೂಕು ಅವೇರಹಳ್ಳಿ ಕೈಗಾರಿಕಾ ಪ್ರದೇಶದ ಮುನೇಶ್ವರ ದೇವಾಲಯ ನೆಡೆದಿದೆ.
ಘಟನೆಯಲ್ಲಿ ರಾಯಚೂರು ಮೂಲದ ಹುಸೇನ್‌ಬಿ (15) ಮೃತ ಮೃತಪಟ್ಟಿದ್ದಾಳೆ. ತಂದೆ ಇಮಾಮ್ ಕಳೆದ 6 ತಿಂಗಳ ಹಿಂದೆ ಸ್ವಂತ ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ಕೆಂಗಲ್ ಕೆಂಪೋಹಳ್ಳಿಗೆ ಬಂದು ಅಕ್ಕಪಕ್ಕದ ಗ್ರಾಮಗಳಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ವಲಸಿಗರು. ಹೀಗೆ ಕಟ್ಟಿಗೆ ತರಲು ತೆರಳಿದ್ದ ವೇಳೆ ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಅತೀ ವೇಗವಾಗಿ ಬಂದ ಕ್ರೇನ್ ವಾಹನ ಡಿಕ್ಕಿ ಹೊಡೆದು ಬಾಲಕಿ ತಲೆ ದೇಹದ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನೂ ಘಟನೆಗೆ ಕ್ರೇನ್ ವಾಹನ ಚಾಲಕನ ಅತೀ ವೇಗ ಚಾಲನೆ ಮತ್ತು ಅಜಾಗರೂಕತೆಯಿಂದ ಈ ಅವಘಡ ನೆಡೆದಿದ್ದು, ಕ್ರೇನ್ ವಾಹನ ಸಹಿತ ಚಾಲಕನನ್ನು ವಶಕ್ಕೆ ಪಡೆದ ದಾಬಸ್ ಪೇಟೆ ಪೊಲೀಸ್ರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
20/04/2022 01:35 pm