ಬೆಂಗಳೂರು: ಕಾರು ಚಾಲಕ ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.ಘಟನೆಯಲ್ಲಿ ಎರಡು ಮೂರು ವಾಹನಗಳಿಗೆ ಹಾನಿಯಗಿದ್ದು ಸರಣಿ ಅಪಘಾತ ಸಂಭವಿಸದೆ. ಪೀಣ್ಯ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದ್ದು, ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಇನ್ನು ಅಪಘಾತದಿಂದ ಫ್ಲೈಓವರ್ ಮೇಲೆ ಗಂಟೆಗಟ್ಟಲೇ ಕೀಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರೋ ಪೀಣ್ಯಾ ಸಂಚಾರಿ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರೆ.
PublicNext
26/03/2022 10:27 pm