ದೊಡ್ಡಬಳ್ಳಾಪುರ: ತಾಲೂಕಿನ ಮಾರಸಂದ್ರ ಬಳಿ ಇಂದು ಸಂಜೆ ಭೀಕರ ಅಪಘಾತ ನಡೆದಿದೆ. ಬೈಕ್ ಸವಾರ ಮತ್ತು ಬೊಲೆರೋ ಚಾಲಕ ಇಬ್ಬರು ಗಂಭೀರವಾಗಿ ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೈಕ್ ಸವಾರ ಕ್ರಾಸ್ ಮಾಡುವಾಗ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಅದೇ ವೇಗದಲ್ಲಿ ಡಿವೈಡರ್ ಮೇಲೂ ವಾಹನ ಹತ್ತಿದ ಪರಿಣಾಮ ಎರಡು ಲೈಟನಿಂಗ್ ಪೋಲುಗಳು ಮುರಿದು ಬಿದ್ದಿವೆ. ಬಳಿಕ ವಾಹನ ರಸ್ತೆಗೆ ಪಲ್ಟಿ ಹೊಡೆದಿದೆ.
ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದರು, ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಟ್ರಾಫಿಕ್ ತೆರವುಗೊಳಿಸಿದರು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
18/03/2022 10:29 pm