ಯಲಹಂಕ: ಬೆಂಗಳೂರಿನಲ್ಲಿ ಜಲಮಂಡಳಿ ಎಂಜಿನಿಯರ್ಗಳು ಮತ್ತು ಅಧ್ಯಕ್ಷರ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾಮಗಾರಿ ಇಂದಾಗಿ ತಗ್ಗು ಗುಂಡಿಗೆ ಬೈಕ್ ಬಿದ್ದು ಹಾವೇರಿ ಮೂಲದ ಸವಾರ ಅಶ್ವಿನ್(27) ಸಾವನ್ನಪ್ಪಿರುವ ಘಟನೆ ಎಂ.ಎಸ್.ಪಾಳ್ಯದ ಮುನೇಶ್ವರ ಲೇಔಟ್ ನಲ್ಲಿ ನಡೆದಿದೆ.
ಅಶ್ವಿನ್ ಮೃತಪಟ್ಟ ಜಾಗದಲ್ಲಿ ಜನ ಮತ್ತು ಅಶ್ವಿನ್ ಸಂಬಂಧಿಕರು, ಸ್ನೇಹಿತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಶ್ವಿನ್ ಮೃತಪಟ್ಟಿದ್ದಾನೆ.
ಅಶ್ವಿನ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡ್ತಿದ್ರು ಸ್ಥಳಕ್ಕೆ ಆಂಬ್ಯೂಲೆನ್ಸ್ ಬಾರದ ಹಿನ್ನಲೆಯಲ್ಲಿ,ಸ್ಥಳೀಯರೇ ಕಾರಿನಲ್ಲಿ ಕರೆದುಕೊಂಡು ಹೋಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದುರಾದೃಷ್ಟವಶಾತ್ ಅಶ್ವಿನ್ ಬದುಕುಳಿಯಲಿಲ್ಲ.ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಲಿ ಎನ್ನುವುದು ಸಾರ್ವಜನಿಕರ ಕೂಗಾಗಿದೆ.
ಸುರೇಶ್ ಬಾಬು,
ಪಬ್ಲಿಕ್ ನೆಕ್ಸ್ಟ್ ಯಲಹಂಕ
PublicNext
14/03/2022 05:07 pm